2017ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ
2017ನೇ ಸಾಲಿನ ಪ್ರತಿಷ್ಟಿತ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ 121 ನಿರ್ಮಾಪಕರು ಅರ್ಜಿ ಸಲ್ಲಿಸಿದ್ದರು. ಅರ್ಹತೆ ಹೊಂದಿದ್ದ 121 ಚಲನಚಿತ್ರಗಳನ್ನು ವೀಕ್ಷಿಸಿ ಆಯ್ಕೆ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರ 'ಅತ್ಯುತ್ತಮ ಮನರಂಜನಾ ಚಿತ್ರ' ಪ್ರಶಸ್ತಿ ಪಡೆದುಕೊಂಡಿದೆ.
'ಮಂಜರಿ' ಚಿತ್ರದ ಅಭಿನಯಕ್ಕಾಗಿ ವಿಶೃತ್ ನಾಯ್ಕ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದಿದ್ದಾರೆ. ಇನ್ನೂ 'ಹೆಬ್ಬೆಟ್ ರಾಮಕ್ಕ' ಚಿತ್ರದ ನಟನೆಗಾಗಿ ನಟಿ ತಾರಾ ಅನುರಾಧಾ 'ಅತ್ಯುತ್ತಮ ನಟಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ. 2017ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ, ನೋಡಿ...

ಬೆಸ್ಟ್ ಫಿಲ್ಮ್ ಯಾವುದು.?
ಮೊದಲನೇ ಅತ್ಯುತ್ತಮ ಚಿತ್ರ: ಶುದ್ಧಿ
ಎರಡನೇ ಅತ್ಯುತ್ತಮ ಚಿತ್ರ: ಮಾರ್ಚ್ 22
ಮೂರನೇ ಅತ್ಯುತ್ತಮ ಚಿತ್ರ: ಪಡ್ಡಾಯಿ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಹೆಬ್ಬೆಟ್ ರಾಮಕ್ಕ

ರಾಜಕುಮಾರ ಚಿತ್ರಕ್ಕೆ ಪ್ರಶಸ್ತಿ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ರಾಜಕುಮಾರ
ಅತ್ಯುತ್ತಮ ಮಕ್ಕಳ ಚಿತ್ರ: ಎಳೆಯರು ನಾವು ಗೆಳೆಯರು
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಅಯನ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಸೋಫಿಯಾ (ಕೊಂಕಣಿ)

ಬೆಸ್ಟ್ ಆಕ್ಟರ್ ಯಾರು.?
ಅತ್ಯುತ್ತಮ ನಟ: ವಿಶೃತ್ ನಾಯ್ಕ (ಚಿತ್ರ: ಮಂಜರಿ)
ಅತ್ಯುತ್ತಮ ನಟಿ: ತಾರಾ ಅನುರಾಧಾ (ಚಿತ್ರ: ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಪೋಷಕ ನಟ: ಮಂಜುನಾಥ ಹೆಗಡೆ (ಚಿತ್ರ: ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ: ರೇಖಾ (ಚಿತ್ರ: ಮೂಕ ನಾಯಕ)

ಬೆಸ್ಟ್ ಕ್ಯಾಮರಾಮ್ಯಾನ್ ಯಾರು.?
ಅತ್ಯುತ್ತಮ ಕತೆ: ಹನುಮಂತ ಬಿ.ಹಾಲಿಗೇರಿ (ಚಿತ್ರ: ಕೆಂಗುಲಾಬಿ)
ಅತ್ಯುತ್ತಮ ಚಿತ್ರಕತೆ; ವೆಂಕಟ್ ಭಾರದ್ವಾಜ್ (ಚಿತ್ರ: ಕೆಂಪಿರ್ವೆ)
ಅತ್ಯುತ್ತಮ ಸಂಭಾಷಣೆ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ (ಚಿತ್ರ: ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ: ಸಂತೋಷ್ ರೈ ಪಾತಾಜಿ (ಚಿತ್ರ; ಚಮಕ್)

ಅತ್ಯುತ್ತಮ ಸಂಗೀತ ನಿರ್ದೇಶಕ ಯಾರು.?
ಅತ್ಯುತ್ತಮ ಸಂಗೀತ ನಿರ್ದೇಶನ: ವಿ.ಹರಿಕೃಷ್ಣ (ಚಿತ್ರ: ರಾಜಕುಮಾರ)
ಅತ್ಯುತ್ತಮ ಸಂಕಲನ: ಹರೀಶ್ ಕೊಮ್ಮೆ (ಚಿತ್ರ: ಮಫ್ತಿ)
ಅತ್ಯುತ್ತಮ ಬಾಲ ನಟ: ಮಾಸ್ಟರ್ ಕಾರ್ತಿಕ್ (ಚಿತ್ರ: ರಾಮರಾಜ್ಯ)
ಅತ್ಯುತ್ತಮ ಬಾಲ ನಟಿ: ಶ್ಲಘ ಸಾಲಿಗ್ರಾಮ (ಚಿತ್ರ: ಕಟಕ)

ವಿಶೇಷ ಪ್ರಶಸ್ತಿಗಳು
ಅತ್ಯುತ್ತಮ ಕಲಾ ನಿರ್ದೇಶನ: ರವಿ.ಎಸ್.ಎ (ಚಿತ್ರ: ಹೆಬ್ಬುಲಿ)
ಅತ್ಯುತ್ತಮ ಗೀತ ರಚನೆ: ಜೆ.ಎಂ.ಪ್ರಹ್ಲಾದ್ (ಚಿತ್ರ: ಮುತ್ತು ರತ್ನದ ಪ್ಯಾಟೆ)
ಅತ್ಯುತ್ತಮ ಹಿನ್ನಲೆ ಗಾಯಕ: ತೇಜಸ್ವಿ ಹರಿದಾಸ್ (ಹಾಡು: ವಲಸೆ ಬಂದವರೇ, ಚಿತ್ರ: ಹುಲಿರಾಯ)
ಅತ್ಯುತ್ತಮ ಹಿನ್ನಲೆ ಗಾಯಕಿ: ಅಪೂರ್ವ ಶ್ರೀಧರ್ (ಹಾಡು: ಅಸಾದುಲ್ಲಾ ದಾಡಿ ಬಿಟ್ಟ, ಚಿತ್ರ: ದಯವಿಟ್ಟು ಗಮನಿಸಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಶ್ರೀದರ್ಶನ್ (ಚಿತ್ರ: ಮಹಾಕಾವ್ಯ ಮಿತ್ರ, ಚಿತ್ರ; ರಾಗ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಸುರೇಶ್.ಕೆ (ಚಿತ್ರ: ಹೆಬ್ಬುಲಿ)


Click it and Unblock the Notifications