20 ವರ್ಷದ ಹಿಂದಿನ 'ಎ' ಚಿತ್ರವನ್ನ ಉಪೇಂದ್ರ ಮತ್ತೆ ಮಾಡಿದ್ರೆ.?

By Bharath Kumar

Recommended Video

20 ವರ್ಷದ ಹಿಂದಿನ 'ಎ' ಚಿತ್ರವನ್ನ ಉಪೇಂದ್ರ ಮತ್ತೆ ಮಾಡಿದ್ರೆ? | Filmibeat Kannada

'ತರ್ಲೆ ನನ್ ಮಗ', 'ಶ್', 'ಸ್ವಸ್ತಿಕ್', 'ಆಪರೇಷನ್ ಅಂತ', ಹಾಗೂ 'ಓಂ' ಚಿತ್ರಗಳನ್ನ ನಿರ್ದೇಶನ ಮಾಡಿ ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದ ಡೈರೆಕ್ಟರ್ ಉಪೇಂದ್ರ.

ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಾ, ಅಭಿನಯದಲ್ಲೂ ಕಮಾಲ್ ಮಾಡಲು ತಯಾರಾಗುತ್ತಿದ್ದ ಉಪ್ಪಿ, 1998 ರಲ್ಲಿ ದೃಢ ನಿರ್ಧಾರ ಮಾಡಿಯೇಬಿಟ್ಟರು. ತಾನೇ ನಿರ್ದೇಶನ ಮಾಡಿದ 'ಎ' ಚಿತ್ರಕ್ಕೆ ತಾನೇ ನಾಯಕನಾಗಿ ಪ್ರಮೋಷನ್ ಪಡೆದುಕೊಂಡರು.

ಅಲ್ಲಿಂದ, ಉಪೇಂದ್ರ ಮತ್ತೆ ಹಿಂತಿರುಗಲೇ ಇಲ್ಲ. ಡೈರೆಕ್ಷನ್ ಕಮ್ಮಿ ಮಾಡಿ ನಟನೆ ಜಾಸ್ತಿ ಮಾಡಿದ್ರು. ಸಾಲು ಸಾಲು ಸಿನಿಮಾ ಮಾಡಿ ಸೂಪರ್ ಸ್ಟಾರ್ ಪಟ್ಟಕ್ಕೇರಿದರು. ಉಪ್ಪಿ ಎಷ್ಟೇ ಸೂಪರ್ ಸ್ಟಾರ್ ಆದ್ರು, 'ಎ' ಚಿತ್ರವನ್ನ ಮಾತ್ರ ಯಾರೂ ಮರೆಯಲ್ಲ. ಉಪ್ಪಿ ಮತ್ತೆ 'ಎ' ರೀತಿಯ ಸಿನಿಮಾಗಳನ್ನ ಮಾಡಲಿ ಎನ್ನುವುದು ಅಭಿಮಾನಿಗಳ ಬೇಡಿಕೆ. ಅಂದ್ಹಾಗೆ, 'ಎ' ಸಿನಿಮಾ ತೆರೆಕಂಡ 20 ವರ್ಷ ಆಗಿದೆ. ಜನವರಿ 16, 1998 ರಂದು 'ಎ' ಸಿನಿಮಾ ರಿಲೀಸ್ ಆಗಿತ್ತು. ಒಂದು ವೇಳೆ 'ಎ' ಸಿನಿಮಾ ಮತ್ತೆ ಮಾಡಿದ್ರೆ ಹೇಗಿರುತ್ತೆ?. ಮುಂದೆ ಓದಿ....

ಉಪ್ಪಿ ಡೈರೆಕ್ಷನ್ ನಲ್ಲಿ ಮತ್ತೆ 'ಎ'.?

ಉಪ್ಪಿ ಡೈರೆಕ್ಷನ್ ನಲ್ಲಿ ಮತ್ತೆ 'ಎ'.?

20 ವರ್ಷಗಳ ಹಿಂದಿನ 'ಎ' ಚಿತ್ರವನ್ನ ಈಗಿನ ಕಾಲದಲ್ಲಿ ಮತ್ತೆ ಮಾಡಿದ್ರೆ ಹೇಗಿರುತ್ತೆ ಅಲ್ವಾ. ಅದೇ ಉಪೇಂದ್ರ ಡೈರೆಕ್ಷನ್ ಮಾಡಿ, ಜೊತಗೆ ತಾವೇ ನಾಯಕನಾಗಿ ಅಭಿನಯಿಸಿದ್ರೆ ಅಭಿಮಾನಿಗಳಿಗೆ ಅದಕ್ಕಿಂತ ಸಂಭ್ರಮ ಮತ್ತೊಂದಿಲ್ಲ.

ಮತ್ತೆ ಬರ್ತಾರೆ ಚಾಂದಿನಿ

ಮತ್ತೆ ಬರ್ತಾರೆ ಚಾಂದಿನಿ

'ಎ' ಚಿತ್ರದಲ್ಲಿ ನಟಿಸಿದ ಚಾಂದಿನಿ ಸುಮಾರು ವರ್ಷದ ನಂತರ ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡಿದ್ರು. ಕಳೆದ ವರ್ಷ 'ಖೈದಿ' ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ರೀ ಎಂಟ್ರಿ ಪಡೆದುಕೊಂಡಿದ್ದರು. ಒಂದು ವೇಳೆ ಉಪ್ಪಿ 'ಎ' ಸಿನಿಮಾ ಕೈಗೆತ್ತಿಕೊಂಡ್ರೆ, ಚಾಂದಿನಿ ಅಭಿನಯಿಸೋದು ಪಕ್ಕಾ ಅನ್ಸುತ್ತೆ.

ಹಲವರಿಗೆ ಲೈಫ್ ಕೊಟ್ಟ ಸಿನಿಮಾ

ಹಲವರಿಗೆ ಲೈಫ್ ಕೊಟ್ಟ ಸಿನಿಮಾ

'ಎ' ಸಿನಿಮಾ ಹಲವು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಜೀವನ ಕೊಟ್ಟ ಚಿತ್ರ. ಈ ಚಿತ್ರದ ಮೂಲಕ ಉಪೇಂದ್ರ ನಾಯಕನಾದರು. ಚಾಂದಿನಿ ನಾಯಕಿಯಾದ್ರು. ಗುರುಕಿರಣ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯವಾದರು. ಖ್ಯಾತ ಛಾಯಾಗ್ರಾಹಕ ಎಚ್.ಸಿ ವೇಣು ಅವರೂ ಈ ಚಿತ್ರದಲ್ಲಿ ಬೆಳಕಿಗೆ ಬಂದರು.

ರಾಜಕಾರಣದಲ್ಲಿ ಉಪೇಂದ್ರ

ರಾಜಕಾರಣದಲ್ಲಿ ಉಪೇಂದ್ರ

'ಉಪೇಂದ್ರ ಮತ್ತೆ ಬಾ' ಚಿತ್ರದ ನಂತರ ಸಿನಿಮಾಗೆ ವಿಶ್ರಾಂತಿ ನೀಡಿರುವ ಉಪೇಂದ್ರ, 'ಕೆಪಿಜೆಪಿ' ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪ್ಪಿ ಸಿನಿಮಾ ಮಾಡುವುದು ಅನುಮಾನವೆನ್ನಲಾಗಿದೆ. ಹಾಗಿದ್ದರೂ, ಉಪ್ಪಿ ಅಭಿಮಾನಿಗಳಿಗೆ ಇಂತಹದೊಂದು ಕುತೂಹಲ, ಬೇಡಿಕೆ, ಮಾತ್ರ ಇದ್ದೇ ಇದೆ.

More from Filmibeat

English summary
20th anniversary of the iconic film by Upendra's A. The film was a sensation upon release and continues to be considered a special film. Director Upendra became lead actor Upendra with this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X