ಅತುಲ್ ಕುಲಕರ್ಣಿಗೂ ಕನ್ನಡನಾಡಿಗೂ ಭಾರೀ ನಂಟು

Atul Kulkarni
ನಟ ಅತುಲ್ ಕುಲಕರ್ಣಿ ಮತ್ತೆ ಕನ್ನಡ ಸಿನಿಮಾವೊಂದರ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಕನ್ನಡ ಸಿನಿಪ್ರೇಕ್ಷಕರಿಗೆ ನಟ ಅತುಲ್ ಕುಲಕರ್ಣಿ ಹೊಸಬರೇನಲ್ಲ. ಈಗಾಗಲೇ ಅವರು ಭೂಮಿಗೀತ, ಆ ದಿನಗಳು, ಯಕ್ಷ ಹಾಗೂ ಎಕೆ 56 ಚಿತ್ರಗಳಲ್ಲಿ ನಟಿಸಿ ಗಮನಸೆಳೆದವರು. ಇದೀಗ ಸದ್ಯ 'ಎದೆಗಾರಿಕೆ' ಚಿತ್ರಕ್ಕಾಗಿ ಬೆಂಗಳೂರಿನಲ್ಲಿದ್ದಾರೆ. ಸಿನಿಪ್ರೇಕ್ಷಕರು ಮತ್ತೆ ಇವರ ನಟನೆಯ ಝಲಕ್ ನೋಡಿ ಬೆರಗಾಗಬಹುದು.

ಇಷ್ಟೇ ಅಲ್ಲ, ಇವರಿಗೆ ಕರ್ನಾಟಕದ ನಂಟು ಸಾಕಷ್ಟಿದೆ. ಈ ಕುರಿತು ಅತುಲ್ ಕುಲಕರ್ಣಿ, "ನನ್ನ ಹೃದಯಕ್ಕೆ ಹತ್ತಿರವಿರುವ ಕರ್ನಾಟಕವನ್ನು ನಾನು ನಟಿಸುವ ಕನ್ನಡ ಚಿತ್ರಗಳು ಇನ್ನೂ ಹತ್ತಿರಕ್ಕೆ ತರುತ್ತವೆ. ನನ್ನ ಕುಟುಂಬ ನೆಲೆಸಿರುವುದು ಬೆಳಗಾಂನಲ್ಲಿ. ನನ್ನ ಅಪ್ಪ ಕನ್ನಡದಲ್ಲೇ ವಿದ್ಯಾಭ್ಯಾಸವನ್ನೂ ಪೂರೈಸಿದ್ದಾರೆ. ಈ ಸಂಬಂಧವನ್ನು ಯಾವತ್ತೂ ಉಳಿಸಿ ಬೆಳೆಸಿಕೊಳ್ಳಲು ನಾನು ಬಯಸುತ್ತೇನೆ" ಎಂದಿದ್ದಾರೆ.

ಸದ್ಯ ಅತುಲ್, 'ಮರಾಠಿ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೊಂದು 'ಸಿಂಗ್ಯುಲಾರಿಟಿ' ಎಂಬ ಇಂಗ್ಲಿಷ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅಮೀರ್ ಖಾನ್, ಅಮಿತಾಬ್, ನಾಸಿರುದ್ದೀನ್ ಷಾ ಹಾಗೂ ವಿದ್ಯಾ ಬಾಲನ್ ನಟನೆ ಹಾಗೂ ವೃತ್ತಿಪರತೆಯನ್ನು ಮೆಚ್ಚುವ ಅತುಲ್ ಕುಲಕರ್ಣಿ, "ಬಾಲಿವುಡ್ ಚಿತ್ರಗಳು ಭಾರತದ ಎಲ್ಲಾ ಸಂಸ್ಕೃತಿಗಳ ಸಂಗಮ" ಎನ್ನುತ್ತಾರೆ. ಈ ಕನ್ನಡ ನಾಡು, ನುಡಿ ಹಾಗೂ ಕನ್ನಡ ಚಿತ್ರವನ್ನು ಇಷ್ಟಪಡುವ ನಟ ಅತುಲ್ ಕುಲಕರ್ಣಿ ಸಮಾಜ ಸೇವೆಯನ್ನೂ ಇಷ್ಟಪಡುತ್ತಾರೆ . (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Atul Kulkarni once again came to Bangalore for shooting of movie 'Edegarike'. He told that his family lives in Belgaum, Karnataka. So, he finds way through Kannada Film to continue relationship with Kannadigas. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X