»   » ಮೂವರು ಹೀರೋಯಿನ್‌ಗಳ ಜೊತೆ ದರ್ಶನ್ ವಿರಾಟ್

ಮೂವರು ಹೀರೋಯಿನ್‌ಗಳ ಜೊತೆ ದರ್ಶನ್ ವಿರಾಟ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರಕ್ಕೆ ವಿರಾಟ್ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ವಾಸು. ಆಕ್ಷನ್ ಪ್ರಧಾನ ಚಿತ್ರವಾದ ಇದರಲ್ಲಿ ಮೂರು ಮಂದಿ ನಾಯಕಿಯರು. ಕತೆ ಎಂ ಎಸ್ ರಮೇಶ್ ಅವರದು. ಚಿತ್ರಕತೆಯನ್ನು ವಾಸು ಹಾಗೂ ಎಂ ಎಸ್ ರಮೇಶ್ ಕೂತು ಸಿದ್ಧಪಡಿಸಿದ್ದಾರೆ.

ಚಿತ್ರದ ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಒಬ್ಬರು ಬೆಂಗಳೂರು ಉಳಿದಿಬ್ಬರು ಮುಂಬೈ ಬೆಡಗಿಯರು ಎನ್ನಲಾಗಿದೆ. ರವಿ ವರ್ಮ ಅವರ ಸಾಹಸ, ಕೆ ಎಂ ಪ್ರಕಾಶ್ ಅವರ ಸಂಕಲನ, ವಿ ಹರಿಕೃಷ್ಣ ಅವರ ಸಂಗೀತ ಹಾಗೂ ಎ ವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಈ ಚಿತ್ರದ ಮುಹೂರ್ತ ಆಗಸ್ಟ್ 12ಕ್ಕೆ ನಡೆಯಲಿದೆ. ಸೆಪ್ಟೆಂಬರ್ 15ರಿಂದ ರೆಗ್ಯುಲರ್ ಶೂಟಿಂಗ್ ಬೆಂಗಳೂರಿನಲ್ಲಿ ಆರಂಭವಾಲಿದೆ. ಸದ್ಯಕ್ಕೆ ದರ್ಶನ್ ಕೈಯಲ್ಲಿ ಸಾರಥಿ, ಬುಲ್ ಬುಲ್, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಮೈಸೂರು ಹುಡುಗ ಚಿತ್ರಗಳಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Challenging Star Darshan's new flick titled as Viraat to be directed by H. Vasu. The story has been written by M.S. Ramesh. Viraat will have editing by K.M. Prakash, fights by Ravi Varma, music by Harikrishna and cinematography by A.V. Krishna Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada