For Quick Alerts
  ALLOW NOTIFICATIONS  
  For Daily Alerts

  ಲೈಫು ಇಷ್ಟೇನೆ ಪವನ್ ಗೆ 'ಲೈಫ್' ಕೊಟ್ಟ ದಿಗಂತ್

  |
  <ul id="pagination-digg"><li class="next"><a href="/news/21-diganth-acts-pawan-kumar-movie-aid0172.html">Next »</a></li></ul>

  ಗುಳಿ ಕೆನ್ನೆಯ ಚಾಕೋಲೇಟ್ ಹೀರೋ ದಿಗಂತ್, 'ಲೈಫು ಇಷ್ಟೇನೆ' ನಿರ್ದೇಶಕ ಪವನ್ ಕುಮಾರ್ ಅವರಿಗೆ ಮತ್ತೆ 'ಲೈಫು' ಕೊಡಲಿದ್ದಾರೆ. ಲೈಫು ಇಷ್ಟೇನೆ ಚಿತ್ರದ ನಂತರ ಪವನ್ ಆಗೀಗ ಸ್ವಲ್ಪ ಸುದ್ದಿಯಾದರೂ ಸಿನಿಮಾ ಮಾಡಿಲ್ಲ. ಈಗ ನೋಡಿದರೆ ಸದ್ಯದಲ್ಲೇ ಮತ್ತೆ ದಿಗಂತ್ ಹಾಗೂ ಪವನ್ ಜೋಡಿಯ ಚಿತ್ರ ಸೆಟ್ಟೇರಲಿದೆ. ದಿಗಂತ್ ಅವರೇ ನಾಯಕರಾಗಲಿರುವ ಈ ಚಿತ್ರದ ಹೆಸರು ಲೂಸಿಯಾ. ಚಿತ್ರ ಸೆಟ್ಟೇರಲು ಕಾರಣವೇ ದಿಗಂತ್.

  ಆಗಿದ್ದಿಷ್ಟು. ಲೈಫು ಇಷ್ಟೇನೆ ಚಿತ್ರ ಯಶಸ್ವಿಯಾದ ನಂತರ ಪವನ್, ಸಿನಿಮಾ ಕಥೆ ಮಾಡಿಕೊಂಡು ಅದಕ್ಕೆ 'ಲೂಸಿಯಾ' ಅಂತ ಹೆಸರಿಟ್ಟು ಸಾಕಷ್ಟು ನಿರ್ಮಾಪಕರ ಮನೆಮುಂದೆ ನಿಂತು ವಾಪಸ್ ಬಂದಿದ್ದರು. ಅಷ್ಟೇ ಅಲ್ಲ, ಬಹಳಷ್ಟು ಸ್ಟಾರ್ ಗಳ ಕಾಲ್ ಶೀಟ್ ಕೇಳಿ 'ನೋ' ಎನಿಸಿಕೊಂಡಿದ್ದರು. ಏನುಮಾಡಬೇಕೆಂದು ತೋಚದೇ ಗಡ್ಡ ಕೆರೆದುಕೊಳ್ಳತ್ತಾ ಆಕಾಶ ನೋಡುತ್ತಿದ್ದ ಪವನ್ ಗೆ ಆಪದ್ಬಾಂಧವ ಎನಿಸಿಕೊಂಡಿದ್ದಾರೆ ದಿಗಂತ್.

  ಇದಕ್ಕೂ ಮೊದಲು ಪವನ್ ಸಾಕಷ್ಟು ನಟರನ್ನು ಮಾತನಾಡಿಸಿ ಆಗಲ್ಲ ಅನ್ನಿಸಿಕೊಂಡಿದ್ದು ಗೊತ್ತಿದ್ದರೂ ದಿಗಂತ್, ಪವನ್ ಅವರಿಗೆ 'ನಾನಿದ್ದೇನೆ, ತಲೆಕೆಡಿಸಿಕೊಳ್ಳುವುದು ಬೇಡ" ಎಂದಿದ್ದಾರೆ. ದಿಗಂತ್ ಈಗೇನೂ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿಲ್ಲ. ದೇವ್, ಸನ್ ಆಫ್ ಮುದ್ದೇಗೌಡ ಚಿತ್ರೀಕರಣ ಮುಗಿಸಿ, ತೆಲುಗು ಚಿತ್ರ 'ಅರುಂಧತಿ' ಖ್ಯಾತಿಯ ಕೋಡಿ ರಾಮಕೃಷ್ಣ ಜೊತೆ ಮುಂದಿನ ಸಿನಿಮಾಕ್ಕೆ ಸಿದ್ಧರಾಗುತ್ತಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/21-diganth-acts-pawan-kumar-movie-aid0172.html">Next »</a></li></ul>
  English summary
  Actor Diganth Acts in upcoming movie of director Lifu Ishtene Pawan Kumar movie, Loosiya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X