»   » ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ

ಗಣೇಶ್ ರಿಮೇಕ್ ಚಿತ್ರಕ್ಕೆ ಆಮದು ಬೆಡಗಿ ಯಾಮಿ

By: * ನಿಸ್ಮಿತಾ
Subscribe to Filmibeat Kannada
ganesh and yami gautam
ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಯಾಮಿ ಗೌತಮ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶರ ಮತ್ತೊಂದು ರಿಮೇಕ್ ಚಿತ್ರ"ಉಲ್ಲಾಸ ಉತ್ಸಾಹ"(ತೆಲುಗಿನ ಉಲ್ಲಾಸಂಗಾ ಉತ್ಸಾಹಂಗಾ) ಕ್ಕೆ ನಾಯಕಿಯಾಗಿ ಯಾಮಿ ಆಯ್ಕೆಯಾಗಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಐಎಎಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದ ಚಂದೀಗಢದ ಹುಡುಗಿ ಯಾಮಿ, ಕಡೆಗೆ ಕಾಲಿರಿಸಿದ್ದು ಬಣ್ಣದ ಲೋಕಕ್ಕೆ. ಎನ್ ಡಿ ಟಿವಿ ನಡೆಸಿದ ಪ್ರತಿಭಾ ಶೋಧ ಕಾರ್ಯಕ್ರಮದಲ್ಲಿ ಕುತೂಹಲಕ್ಕೆಂದು ಭಾಗವಹಿಸಿದ್ದ ಯಾಮಿ, ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರವಹಿಸುವ ಅವಕಾಶ ದೊರೆತಿದೆ.

ಎನ್ ಡಿ ಟಿವಿ ಇಮೇಜ್ ವಾಹಿನಿಯಲ್ಲಿ ಮುಂಬರುವ ರಾಜ್ ಕುಮಾರ್ ಆರ್ಯನ್ ಎಂಬ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಯಾಮಿ ಕಾಣಿಸಿಕೊಳ್ಳಲಿದ್ದಾರೆ. ಯಾಮಿಯ ತಂದೆ ಮುಖೇಶ್ ಗೌತಮ್ ಜೀ ಪಂಜಾಬಿ ಹಾಗೂ ಜೀ ನ್ಯೂಸ್ ವಾಹಿನಿಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಸದ್ಯ ಮುಂಬಯಿಯಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ರಾಜವಂಶದ ಕಥಾವಸ್ತುವುಳ್ಳ ಧಾರಾವಾಹಿಯಲ್ಲಿ ಕತ್ತಿವರಸೆ, ಸಾಹಸ ಪ್ರಧಾನ ಪಾತ್ರ ನಿರ್ವಹಣೆ ಖುಷಿಕೊಟ್ಟಿದೆ. ರಾಜಸ್ತಾನದಲ್ಲಿ ಚಿತ್ರೀಕರಣ ಸೊಗಸಾಗಿ ಮೂಡಿಬಂದಿದೆ .ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಒಳ್ಳೆ ವಿಷಯಗಳನ್ನು ಕೇಳಿದ್ದೇನೆ. ಗಣೇಶ್ ಅವರ ಜತೆ ಅಭಿನಯಿಸುವುದಕ್ಕೆ ಸಂತೋಷವಾಗುತ್ತಿದೆ ಎನ್ನುತ್ತಾರೆ 18 ರ ಹರೆಯದ ಯಾಮಿ.

ಗಣೇಶ್ ಕೂಡ ಕಿರುತೆರೆಯಿಂದ ಹಿರಿತೆರೆಗೆ ಕಾಲಿರಿಸಿ, ಚಿತ್ರರಂಗದಲ್ಲಿ ಬೆಳೆಯುತ್ತಿರುವಾಗಲೇ, ಕಿರುತೆರೆಯ ನಟಿ ಯಾಮಿ, ಗಣೇಶ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಶುಭ ಸಂಕೇತ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ.

ಪೂರಕ ಓದಿಗೆ:

ಮತ್ತೊಂದು ರಿಮೇಕ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್
ಚಂದ್ರಶೇಖರ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್
ಭರ್ಜರಿ ಗಳಿಕೆಯತ್ತ ಗಣೇಶ್ ರ ಸಂಗಮ
ಸ್ವಮೇಕ್ ಮುದುಡುತ್ತಿದೆ ರೀಮೇಕ್ ಅರಳುತ್ತಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada