ಕನ್ನಡದ ಬಾಡಿಗಾರ್ಡ್‌ಗೆ ನವರಸ ನಾಯಕ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಅವರ ಮತ್ತೊಂದು ಚಿತ್ರ ಸೆಟ್ಟೇರಿದೆ . ಈ ಚಿತ್ರವನ್ನು ಅವರ ಧರ್ಮಪತ್ನಿ ಪರಿಮಳಾ ಜಗ್ಗೇಶ್ ಹಾಗೂ ಈ ಹಿಂದೆ ಜಗ್ಗೇಶ್ ಜೊತೆ 'ಡಬಲ್ ಡೆಕ್ಕರ್' ಮಾಡಿದ್ದ ನರಸಿಂಹ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಮಲಯಾಳಂ ಹಿಟ್ ಚಿತ್ರ 'ಬಾಡಿಗಾರ್ಡ್' ರೀಮೇಕ್ ಇದಾಗಿದೆ. ಈ ಚಿತ್ರದ ರೀಮೇಕ್ ಹಕ್ಕುಗಳನ್ನು ದಾಖಲೆ ಬೆಲೆಗೆ ಖರೀದಿಸಿದ್ದಾರೆ ಎಂಬುದು ಗಣಿವರದಿಯಂತೆ ಗಾಂಧಿನಗರದಲ್ಲಿ ಲೀಕಾಗಿದೆ. ದಿಲೀಪ್ ಮತ್ತು ನಯನತಾರಾ ಮೂಲ ಚಿತ್ರದಲ್ಲಿ ಅಭಿನಯಿಸಿದ್ದರು.
ಜಗ್ಗೇಶ್ ಅಭಿನಯಿಸಲಿರುವ ಚಿತ್ರದ ನಾಯಕಿ ಡೈಸಿ ಶಾ. ಈ ಚಿತ್ರಕ್ಕೆ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬಾಡಿಗಾರ್ಡ್' ಚಿತ್ರದ ಕತೆ ಸೂಪರ್ ಆಗಿದೆ ಎಂದು ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಜುಲೈ 21ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣವೂ ಆರಂಭವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
The Malayalam super hit Bodyguard starring Dileep and Nayantara will be remade in Kannada now. Jaggesh will be the hero. Narasimhan and Parimala Jaggesh, who had earlier produced Jaggesh's Double Decker, are the producers.


Click it and Unblock the Notifications











