»   » ಶ್ರೀಮುರಳಿಯ ಮುರಾರಿ ಪ್ರಾರಂಭ

ಶ್ರೀಮುರಳಿಯ ಮುರಾರಿ ಪ್ರಾರಂಭ

Posted By:
Subscribe to Filmibeat Kannada

ಶಿವಮಣಿ,ಸಿಹಿಗಾಳಿ ಹಾಗೂ ಯಜ್ಞ ಚಿತ್ರಗಳು ಇನ್ನು ತೆರೆಕಂಡಿಲ್ಲ ಆಗಲೆ ಶ್ರೀಮುರುಳಿಯ ಮತ್ತೊಂದು ಚಿತ್ರಸೆಟ್ಟೇರಿದೆ.ಆರ್.ಎಸ್.ಗೌಡ ನಿರ್ಮಿಸಿ ಎಚ್.ವಾಸು ನಿರ್ದೇಶಿಸುತ್ತಿರುವ 'ಮುರಾರಿ' ಚಿತ್ರ ಪ್ರಾರಂಭವಾಗಿದೆ.

ವಿಜಯ ರಾಘವೇಂದ್ರ ಅವರೊಂದಿಗೆ ಶ್ರೀಮುರಳಿ ನಟಿಸಿದ 'ಮಿಂಚಿನ ಓಟ' ಚಿತ್ರವನ್ನು ಪ್ರೇಕ್ಷಕರು ಇಷ್ಟಪಡಲಿಲ್ಲ. ಚಿತ್ರಮಂದಿರಗಳಿಂದ ಆ ಚಿತ್ರ ಮಿಂಚಿನ ವೇಗದಲ್ಲಿ ಮರೆಯಾಯಿತು. ಮುರಾರಿ ಚಿತ್ರದಲ್ಲಿ ಶ್ರೀಮುರಳಿಯದು ರೌಡಿ ಪಾತ್ರವಂತೆ. ಶ್ರೀಮುರಳಿಗೆ'ಆಕ್ಷನ್ ಸ್ಟಾರ್' ಪಟ್ಟ ಕಟ್ಟಿದ ಮೇಲೆ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸದಿದ್ದರೆ ಹೇಗೆ? ಹಾಗಾಗಿ ಮುರಾರಿ ಚಿತ್ರದಲ್ಲಿ ಐದು ಬೊಂಬಾಟ್ ಪೈಟ್ ಗಳು ಇವೆಯಂತೆ. ಆರು ಹಾಡುಗಳು, ಇಬ್ಬರು ನಾಯಕಿಯರು ಮುರಾರಿಗೆ ಜೋಡಿಯಾಗಲಿದ್ದಾರೆ.

ಶ್ರೀಮುರಳಿ ಯಾವುದೇ ಚಿತ್ರಕ್ಕೆ ಸಹಿ ಹಾಕುವ ಮುನ್ನ ಅಣ್ಣ ವಿಜಯ ರಾಘವೇಂದ್ರ ಹಾಗೂ ತಂದೆ ಚಿನ್ನೇಗೌಡರ ಸಲಹೆ ಪಡೆಯುವ ಪರಿಪಾಠವಿದೆ. ಅಣ್ಣ, ತಂದೆ ಒಪ್ಪಿಗೆ ನೀಡಿದ ಬಳಿಕವೇ ಮುರಾರಿಯನ್ನು ಶ್ರೀಮುರಳಿ ಒಪ್ಪಿಕೊಂಡಿದ್ದಾರೆ.
(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada