ಆದಿತ್ಯ ಹೀರೋ, ವಿಜಿ ವಿಲನ್, ಓಂ ಡೈರೆಕ್ಷನ್, ನಿಖಿ ದುಡ್ಡು
ನಿರ್ದೇಶಕ ಓಂ ಪ್ರಕಾಶ್ ರಾವ್ ಗೆ ಶುಕ್ರದೆಶೆ ಹೊಡೆದಿದೆ. ಕೈಲಿ ಎರಡು ಚಿತ್ರ ಬಾಕಿ ಇರುವಂತೆ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ.
ವಿಜಯ್ ಅಭಿನಯದ ಒಂದು ಚಿತ್ರ, ಆದಿತ್ಯ ನಾಯಕತ್ವದ 'ಕಾಟನ್ ಪೇಟೆ' ಚಿತ್ರಗಳನ್ನು ಮುಗಿಸಬೇಕಿರುವ ಓಂ ಈಗ ಇಬ್ಬರನ್ನು ಒಂದುಗೂಡಿಸಿ ಹೊಸ ಚಿತ್ರ ಸೆಟ್ಟೇರಿಸಲಿದ್ದಾರೆ.
ಸೆ.1ರಂದು ಈ ಹೊಸ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಓಂ ಪ್ರಕಾಶ್ ರಾವ್ ಅವರ ಹೋಮ್ ಪ್ರೊಡಕ್ಷನ್ ನ ಈ ಚಿತ್ರಕ್ಕೆ ನಟಿ ನಿಖಿತಾ ಕೂಡಾ ನಿರ್ಮಾಪಕರಾಗಿದ್ದಾರೆ.
ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಆದಿತ್ಯ ಹೀರೋ, ದುನಿಯಾ ವಿಜಯ್ ವಿಲನ್. ತೆಲುಗಿನ ರಾಣಾ ಚಿತ್ರದ ಯಥಾವತ್ ಜೆರಾಕ್ಸ್ ಕಾಪಿ ಕನ್ನಡದ ಪರದೆ ಮೇಲೆ ಮೂಡಲಿದೆ. ವಿಜಿಗೆ ವಿಲನ್ ಪಾತ್ರ ಹೊಸದೇನಲ್ಲ, ಆದರೆ ಆದಿತ್ಯ ಮತ್ತೆ ಹೀರೋ!?
ನಿಖಿತಾ ನಾಯಕಿ ಪಾತ್ರ ಮಾಡುತ್ತಾರ ಇಲ್ಲವಾ ಸ್ಪಷ್ಟಗೊಂಡಿಲ್ಲ. ಓಂ ಚಿತ್ರ ಎಂದ ಮೇಲೆ ಯಾವುದಾದರೂ ಪಾತ್ರದಲ್ಲಿ ನಿಖಿತಾ ಕಾಣಿಸಿಕೊಳ್ಳದಿದ್ದರೆ ಹೇಗೆ? ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸುತ್ತಿರುವ ಓಂ ನಂಬಿಕೊಂಡು ನಿಖಿ ಕೂಡಾ ಕೇಳಿದಷ್ಟು ಕಾಸು ಮಡಗಿದ್ದಾರೆ. ಮುಂದೇನು ಕಾದು ನೋಡೋಣ...


Click it and Unblock the Notifications











