ಲೀಲಾವತಿ ಮಗ ವಿನೋದ್‌ರಾಜ್‌ಗೆ ನೋ ವೆಲ್‌ಕಂ

ಅಷ್ಟೇ ಅಲ್ಲದೇ ತಮಿಳಿನಲ್ಲಿ 'ತಿರುತ್ತು ಪಾಯಲೆ, ಕಾಂತಸ್ವಾಮಿ ಹಾಗೂ ತೆಲುಗುನಲ್ಲಿ 'ಶ್ರೀ ಮಂಜುನಾಥ ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಆದರೂ ಯಾಕೋ ಚಿತ್ರರಂಗ ಅವರನ್ನು ಕೈಹಿಡಿದಿಲ್ಲ. ಪ್ರೇಕ್ಷಕರೂ ಕೂಡ ವಿನೋದ್ ರಾಜ್ ರನ್ನು ಒಪ್ಪಿಕೊಳ್ಳಲಿಲ್ಲ. ಡಾನ್ಸ್ ಕೂಡ ಚೆನ್ನಾಗಿ ಮಾಡಬಲ್ಲ ವಿನೋದ್ ರಾಜ್ ಗೆ ಚಿತ್ರರಂಗದಲ್ಲಿ ಯಾಕೆ ಅವಕಾಶಗಳಿಲ್ಲ.
ಯಾರ್ಯಾರೋ ಹೊಸಬರು ಬರುತ್ತಿದ್ದಾರೆ, ನೆಲೆ ನಿಲ್ಲುತ್ತಿದ್ದಾರೆ. ಮೇರು ಕಲಾವಿದೆಯೊಬ್ಬಳ ಮಗನಾಗಿದ್ದರೂ ವಿನೋದ್ ರಾಜ್ ನೆಲಮಂಗಲದ ಅಮ್ಮ ಕೊಡಿಸಿದ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಯಾಕೆ? ತಾಯ-ಮಗ ಚಿತ್ರರಂಗದಿಂದ ದೂರ ತಳ್ಳಲ್ಪಟ್ಟಿದ್ದು ಹೇಗೆ?
ಅಥವಾ ಅದು ಅವರೇ ಬಯಸಿದ್ದೂ ಇರಬಹುದಾದದರೂ ಚಿತ್ರರಂಗದಲ್ಲಿ ನೆಲೆಯೂರಲು ಕಷ್ಟವಾದ ಮೇಲೆ ತೆಗೆದುಕೊಂಡ ನಿರ್ಧಾರ ಎಂಬುದಕ್ಕೆ ಪ್ರತ್ಯಕ್ಷ ಪುರಾವೆ ಇದೆ. ಇಬ್ಬರೂ ಈಗ ಭೂಮಿತಾಯಿ ನಂಬಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿನೋದ್ ರಾಜ್ ಗೆ ಯಾಕೆ ಹೀಗೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಉತ್ತರ ಎಂದಾದರೂ ದೊರಕುವುದೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











