ವರದನಾಯಕನಿಗೆ ನಿಕೇಷಾ ಪಟೇಲ್ ಎಂಬ ಪಟಾಕಿ

ನಟ ಚಿರಂಜೀವಿ ಸರ್ಜಾರ ಚಿತ್ರ ವರದನಾಯಕ, ಸದ್ಯದಲ್ಲೇ ಚಿತ್ರೀಕರಣವನ್ನು ಪೂರ್ಣಗೊಳಿಸಲಿದೆ. ಮಾಡೆಲ್ ಹುಡುಗಿ, ನರಸಿಂಹ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ನಾಯಕಿಯಾಗಿರುವ ನಿಕೇಷಾ ಪಟೇಲ್ 'ವರದನಾಯಕ' ಚಿರಂಜೀವಿ ಸರ್ಜಾಗೆ ನಾಯಕಿ. ನಿಕೇಷಾ ಪಟೇಲ್ ನಟಿಸಿರುವ ಚಿತ್ರ 'ನರಸಿಂಹ' ಚಿತ್ರ ಇದೇ ಮಾರ್ಚ್ 23, 2012 ಕ್ಕೆ ಬಿಡುಗಡೆಯಾಗುತ್ತಿದೆ.

ಸುದೀಪ್ ಪ್ರಮುಖ ಪಾತ್ರದಲ್ಲಿರುವ 'ವರದನಾಯಕ' ಚಿತ್ರದಲ್ಲಿ ಚಿರು ಮತ್ತು ನಿಕೇಷಾ ಪಟೇಲ್ ಇಬ್ಬರೂ ಕಾಲೇಜು ಓದುತ್ತಿರುವ ಜೋಡಿ. ಚಿರುಗೆ ಅಣ್ಣನಾಗಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ನಟಿಸಲಿದ್ದಾರೆ ಕನ್ನಡದ ಕಿಚ್ಚ ಸುದೀಪ್. ಖಡಕ್ ಪೊಲೀಸ್ ಅಧಿಕಾರಿಯಾದರೂ ಪ್ರೀತಿಯ ತಮ್ಮನ ಪ್ರೇಮಕ್ಕೆ ಅಡ್ಡಿಯಾಗದ ಪಾತ್ರವಂತೆ ಸುದೀಪ್ ಅವರದು.

ತೆಲುಗಿನಲ್ಲಿ ಸೂಪರ್ ಹಿಟ್ ಎನಿಸಿದ್ದ 'ಲಕ್ಷ್ಯಂ' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಿ ನಿರ್ದೇಶಿಸುತ್ತಿರುವವರು ನಟ ಸಾಯಿಕುಮಾರ್ ಅವರ ಸಹೋದರ ಅಯ್ಯಪ್ಪ. ಚಿತ್ರೀಕರಣ ಆರಂಭವಾಗಿದ್ದರೂ ಪ್ರಮುಖ ಸನ್ನಿವೇಷಗಳ ಚಿತ್ರೀಕರಣ ಬಾಕಿ ಇದೆ. ಸುದೀಪ್ ಜೊತೆಯಲ್ಲಾದರೂ ಚಿರು ವೃತ್ತಿಜೀವನ ಮೇಲಕ್ಕೇರಬಹುದೇ ಎಂದು ಪ್ರಶ್ನಿಸುತ್ತಿದೆ ಗಾಂಧಿನಗರ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada movie Varadanayaka is in shooting stage as sudeep portion has to compleete. Actress Nikeesha Patel is the heroine for Hero Chiranjeevi Sarja in this movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X