ಲೀಲಾವತಿ ಚಿತ್ರರಂಗದಿಂದ ದೂರವಾದದ್ದು ಯಾಕೆ?

<ul id="pagination-digg"><li class="next"><a href="/news/21-actor-vinod-raj-no-chance-in-movie-nelamangala-aid0172.html">Next »</a></li></ul>

Leelavathi
ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಕಾಲದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ತಮ್ಮ ಅಸ್ಥಿತ್ವವನ್ನು ಸ್ಥಾಪಿಸಿ ಕಾಪಾಡಿಕೊಂಡಿದ್ದ ಹಿರಿಯ ನಟಿ ಲೀಲಾವತಿ ಈಗ ತೆರೆಮರೆಗೆ ಸರಿದ್ದಾರೆ. ಅವರು ನೇಪಥ್ಯಕ್ಕೆ ಸರಿದಿದ್ದಾರೆ ಅನ್ನುವುದಕ್ಕಿಂತ ಗಾಂಧಿನಗರ ಅವರನ್ನು ತೆರೆಮೆರೆಗೆ ಸರಿಸಿದೆ ಅನ್ನುವುದೇ ಹೆಚ್ಚು ಸೂಕ್ತ.

೬೦ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಖ್ಯಾತ ನಟಿ ಲೀಲಾವತಿ ನೂರಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ, ಪೋಷಕನಟಿಯಾಗಿ ಹಲವಾರು ಚಿತ್ರಗಳಲ್ಲಿ ಲೀಲಾವತಿ ಅವರ ಮನೋಜ್ಞ ಅಭಿನಯ ಕಲಾಭಿಮಾನಿಗಳ ಮನದಲ್ಲಿ ನೆಲೆಯೂರಿದೆ. ಕೆಲವೇ ವರ್ಷಗಳ ಹಿಂದೆ ಕೂಡ ಅಮ್ಮನಾಗಿ ನಟಿಸಿ ಕನ್ನಡಿಗರಿಗೆ ಪುಳಕ ಹುಟ್ಟಿಸಿದ್ದಾರೆ.

ಅದಿರಲಿ, ಅವರು ಈಗೇನು ಮಾಡುತ್ತಿದ್ದಾರೆ. ರಕ್ತ ಪರಿಚಲನೆ ಸಮಸ್ಯೆಯಿಂದ ಎಂ ಎಸ್ ರಾಮಯ್ಯ ಆಸ್ಪತ್ರೆ ಸೇರಿದ್ದ ಲೀಲಾವತಿ, ಈಗ ಸಾಕಷ್ಟು ಗುಣಮುಖರಾಗಿ ಮನೆ ಸೇರಿದ್ದಾರೆ. ನೆಲಮಂಗಲದ ತಮ್ಮ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲೂ ಸಮಾಜಮುಖಿ ಚೈತನ್ಯ ಉಳಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿ ಅನಾರೋಗ್ಯಕ್ಕೆ ತುತ್ತಾಗಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಚಿತ್ರರಂಗದ ಗಣ್ಯರು ಯಾರೊಬ್ಬರೂ ಹೋಗಿಲ್ಲ. ಆದರೆ ಅದಕ್ಕೆ ಲೀಲಾವತಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೊನ್ನೆ ಮೊನ್ನೆ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೀಡಿದ ಕರೆಗೆ ಬೆಂಬಲ ಸೂಚಿಸುವ ಮೂಲಕ ಶೋಷಣೆ ವಿರುದ್ಧ ದನಿ ಎತ್ತಿ ಸಮಾಜಸೇವೆಗೂ ಕಾಣಿಕೆ ನೀಡಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/21-actor-vinod-raj-no-chance-in-movie-nelamangala-aid0172.html">Next »</a></li></ul>

More from Filmibeat

English summary
Actress Leelavathi is not getting opportunity in movie now. She is leading Rest Life in Nelamangala with his son, actor Vinod Raj&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X