ನಟಿ ಮೈತ್ರೇಯಿಗೆ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ

By Rajendra

ವಿಜಯನಗರ ಪೊಲೀಸ್ ಠಾಣೆಯ ಸಂಚಾರಿ ಪೇದೆ ಎಂ.ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದ ಸಿನಿಮಾ ತಾರೆ ಮೈತ್ರೇಯಿ ಸೇರಿದಂತೆ ಆಕೆಯ ಹೋದರಿಯರಾದ ಸುಪ್ರಿಯಾ, ರೇಖಾ ಹಾಗೂ ರೂಪಾ ಅವರಿಗೆ ಶನಿವಾರ (ಮೇ.21) 5ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಎರಡು ತಿಂಗಳಿಗೊಮ್ಮೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಹಾಜರಾಗಲು ನಟಿ ಮೈತ್ರೇಯಿಗೆ ನ್ಯಾಯಾಲಯ ಸೂಚಿಸಿದೆ.ಒಟ್ಟು 20 ನಿಮಿಷಗಳ ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾಂತಾ ಅವರು ಮುಂದಿನ ವಿಚಾರಣೆಯನ್ನು ಮೇ.31ಕ್ಕೆ ಮುಂದೂಡಿದ್ದಾರೆ. ರು.25 ಸಾವಿರ ಬಾಂಡನ್ನು ಬರೆಸಿಕೊಂಡು ಜಾಮೀನು ಮಂಜೂರು ಮಾಡಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದ ಸಂಚಾರಿ ಪೊಲೀಸ್ ಪೇದೆ ಶಿವಕುಮಾರ್ ಮೇಲೆ ಮೈತ್ರೇಯಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಅಂದಹಾಗೆ ಮೈತ್ರೇಯಿ ಇತ್ತೀಚೆಗಷ್ಟೆ ಸೆಟ್ಟೇರಿದ 'ಮಾಲಿಂಗ' ಚಿತ್ರದ ನಾಯಕಿ. ಈ ಹಿಂದೆ 'ಸೂರ್ಯ ದಿ ಗ್ರೇಟ್' ಚಿತ್ರದಲ್ಲಿ ಅಭಿನಯಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
A Karnataka 5th ACMM court on Saturday granted a conditional bail to Film actress Mythriya (Maitreyi) and three of her relatives in thrashed a traffic police constable on West of Chord Road on Friday afternoon. She has acted in Surya The Great and Malinga movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X