»   » ರಮ್ಯಾ ಕ್ರಿಸ್ ಮಸ್ ಎಲ್ಲಿ, ಯಾರ ಜೊತೆ: ಓದಿ

ರಮ್ಯಾ ಕ್ರಿಸ್ ಮಸ್ ಎಲ್ಲಿ, ಯಾರ ಜೊತೆ: ಓದಿ

Posted By:
Subscribe to Filmibeat Kannada
Ramya
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈ ವರ್ಷದ ಕ್ರಿಸ್ ಮಸ್ ಆಚರಣೆಯನ್ನು ಯುರೋಪಿನಲ್ಲಿ ಆಚರಿಸಲಿದ್ದಾರೆ. ಅದೂ ಅವರ ಪ್ರಿಯಕರ 'ರಫೆಲ್' ಜೊತೆ. ವೃತ್ತಿ ಜೀವನ ಹಾಗೂ ಖಾಸಗಿ ಜೀವನ ಎರಡನ್ನೂ ಅವರಿಷ್ಟದಂತೆ ನಿಭಾಯಿಸಿಯೂ ಕನ್ನಡದ ನಂಬರ್ ಸ್ಥಾನ ಅಲ್ಲಾಡದಂತೆ ಕಾಪಾಡಿಕೊಂಡಿರುವ ರಮ್ಯಾ ಗ್ರೇಟ್ ಅನ್ನಲೇಬೇಕು.

ಈ ಕ್ರಿಸ್ ಮಸ್ ನನ್ನ ಬಾಯ್ ಫ್ರೆಂಡ್ ರಫೆಲ್ ಜೊತೆ ಯುರೋಪಿನಲ್ಲಿ ಆಚರಿಸಲಿದ್ದೇನೆ ಎಂದಿರುವ ರಮ್ಯಾ, ಬಂದಮೇಲೆ ಹೇಗೆ ಆಚರಿಸಲಾಯಿತು ಎಂಬುದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಸಾಮಾಜಿಕ ತಾಣಗಳ ಮೂಲಕ ಈ ಎಲ್ಲಾ ಮಾಹಿತಿಯನ್ನು ಅಭಿಮಾನಿಗಳಿಗಾಗಿ ರಮ್ಯಾ ಹಂಚಿಕೊಂಡಿದ್ದಾರೆ.

ಯುರೋಪಿನಲ್ಲಿ ಕ್ರಿಸ್ ಮಸ್ ಆಚರಿಸಲಿರುವ ರಮ್ಯಾ ಮೀನು ಮತ್ತೆ ತಿನ್ನತ್ತಾರೋ ಹೇಗೆ ಎಂಬುದು ಅವರ ಅಭಿಮಾನಿಗಳು ಚರ್ಚಿಸುತ್ತಿರುವ ವಿಷಯ. ಏಕೆಂದರೆ ಮೀನನ್ನು ಸಾಯಿಸುವಾಗ ಅವುಗಳ ಒದ್ದಾಟ ನೋಡಿ ಬೇಜಾರಾಗಿ ತಾವು ಮೀನು ತಿನ್ನುವುದನ್ನು ಬಿಟ್ಟಿದ್ದಾಗಿ ರಮ್ಯಾ ಹೇಳಿಕೊಂಡಿದ್ದರು. ಬಂದ ಮೇಲೆ ಎಲ್ಲಾ ವಿಷಯ ಅವರಿಂದಲೇ ತಿಳಿಯಲಿದೆ. ಅಲ್ಲಿಯವರೆಗೆ ನೀವು ಆಚರಿಸುವ ಬಗ್ಗೆ ಯೋಚಿಸಿ...(ಒನ್ ಇಂಡಿಯಾ ಕನ್ನಡ)

English summary
Actress Ramya is celebrating Christmas in Europe with her Boy Friend Raphael. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X