ಸಿದ್ಲಿಂಗು ಚಿತ್ರ ಬಿಡುಗಡೆ ಗುಟ್ಟು ಬಿಚ್ಚಿಟ್ಟ ರಮ್ಯಾ

ಸಿದ್ಲಿಂಗು ಚಿತ್ರ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಜನರ ಪ್ರಶ್ನೆಗೆ ಮೋಹಕ ತಾರೆ ರಮ್ಯಾ ಉತ್ತರ ನೀಡಿದ್ದಾರೆ. ಟ್ವೀಟ್ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿರುವ ರಮ್ಯಾ, ಸಿದ್ಲಿಂಗು ಚಿತ್ರ ಬರುವ ವರ್ಷ, ಜನವರಿ 06 ರಂದು ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಆಡಿಯೋ ರೀಲೀಸ್ ಆದಾಗಿನಿಂದಲೂ ಸಾಕಷ್ಟು ಸದ್ದು-ಸುದ್ದಿ ಮಾಡುತ್ತಿರುವ ಸಿದ್ಲಂಗು ಹೊಸ ವರ್ಷದ ಪ್ರಾರಂಭದಲ್ಲಿ ತೆರೆಯ ಮೇಲೆ ಬರಲಿದೆ.

ಮೊದಲ ಬಾರಿಗೆ ಲೂಸ್ ಮಾದ ಅಲಿಯಾಸ್ ಯೋಗೇಶ್ ಜತೆ ನಟಿಸಿರುವ ರಮ್ಯಾ ಈ ಚಿತ್ರದ ತನ್ನ ಪಾತ್ರದ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ರಮ್ಯಾ ಪಾತ್ರ ಹೆಸರು 'ಮಂಗಳಾ' ಹಾಗೂ ಇದೊಂದು ಟೀಚರ್ ಕ್ಯಾರೆಕ್ಟರ್. ಸಾಕಷ್ಟು ಡೀಸೆಂಟ್ ಲುಕ್ ಹಾಗೂ ಪೋಲಿ ಸಂಭಾಷಣೆಯ ವಿಭಿನ್ನತೆ ರಮ್ಯಾ ಪಾತ್ರದಲ್ಲಿದೆ ಎನ್ನಲಾಗಿದೆ.

ಯೋಗೇಶ್ ನನ್ನು ಸಾಕಷ್ಟು ಹೊಗಳಿರುವ ರಮ್ಯಾ, 'ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂತಹ ಪಾತ್ರವನ್ನಾದರೂ ನಿರ್ವಹಿಸಬಲ್ಲ ಪ್ರತಿಭೆ' ಎಂದಿದ್ದಾರೆ. ಜತೆಗೆ ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆತನ ಗುಣವನ್ನೂ ಇಷ್ಟಪಟ್ಟಿದ್ದಾರೆ. ಸಿದ್ಲಿಂಗು ಪಾತ್ರದ ಮೂಲಕ ತಾನು ಹೇಳುವ ಸಂಭಾಷಣೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ ಎಂದು ರಮ್ಯಾ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Ramya twitted that her upcoming movie Sidlingu is releasing on Jan. 02, 2012 all over Karnataka. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X