For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಸುಧಾ ಬೆಳವಾಡಿ ಪುತ್ರಿ ಸಂಯುಕ್ತ ಬೆಳವಾಡಿ

  By Rajendra
  |

  ಕನ್ನಡ ಚಿತ್ರರಂಗದಲ್ಲಿ 'ಮೇಕಪ್ ನಾಣಿ' ಎಂದೇ ಚಿರಪರಿಚಿತರಾದವರು ಬೆಳವಾಡಿ ನಂಜುಂಡಯ್ಯ ನಾರಾಯಣ. ಈಗ ಇದೇ ಕುಟುಂಬದ ಕುಡಿ ಹಾಗೂ ಪೋಷಕ ನಟಿ ಸುಧಾ ಬೆಳವಾಡಿ ಅವರ ಮಗಳು ಸಂಯುಕ್ತ ಬೆಳವಾಡಿ 'ಲೈಫು ಇಷ್ಟೇನೆ' ಎಂದು ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

  ಯೋಗರಾಜ್ ಭಟ್‌ ಬಳಿ ಕೆಲಸ ಮಾಡಿದ ಪವನ್ ಕುಮಾರ್ ಚಿತ್ರದ ನಿರ್ದೇಶಕರು. ಧೂದ್ ಪೇಡ ದಿಗಂತ್ ಚಿತ್ರದ ನಾಯಕ ನಟ. ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರದಲ್ಲಿ ದಿಗಂತ್‌ ಸಹೋದರನಾಗಿಯೂ ಪವನ್ ನಟಿಸಿದ್ದರು. 'ಲೈಫು ಇಷ್ಟೇನೆ' ಚಿತ್ರ ಪವನ್ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ.

  ಆಮದು ಬೆಡಗಿಯರ ನಡುವೆ ಅಪ್ಪಟ ಕನ್ನಡತಿಯೊಬ್ಬಳು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. 'ಲೈಫು ಇಷ್ಟೇನೆ' ಚಿತ್ರದ ಮತ್ತೊಬ್ಬ ನಾಯಕಿ ಸಿಂಧು. ಸದ್ಯಕ್ಕೆ ಚಿತ್ರಕತೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಜಾಕ್ ಮಂಜು ನಿರ್ಮಿಸುತ್ತಿರುವ ಚಿತ್ರಕ್ಕೆ ಮನೋಮೂರ್ತಿ ಅವರ ಸಂಗೀತವಿದೆ. [ಯೋಗರಾಜ್ ಭಟ್]

  English summary
  Samyuktha Belawadi, granddaughter of Make Up Naani and Bhargavi Narayan and daughter of actress Sudha Belawadi entering the field of acting in a Kannada film 'Life Ishtene'. She is acting opposite handsome hero Diganth.The movie is directing by Pawan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X