ಶ್ರೀಯಾ ಸರನ್ ಹೃದಯಕ್ಕೆ ಕನ್ನ ಹಾಕಿದ ಅಕ್ಷಯ್
ಗ್ಲಾಮರ್ ಗೊಂಬೆ ಶ್ರಿಯಾ ಸರನ್ ಹೃದಯಕ್ಕೆ ಅಕ್ಷಯ್ 'ಖ'ನ್ನಾ ಹಾಕಿದ್ದಾರೆ! ಸಾಮಾನ್ಯವಾಗಿ ಗಾಸಿಪ್‌ಗಳಿಂದ ಗಾವುದ ದೂರ ಇರುವ ಅಕ್ಷಯ್ ಖನ್ನಾ ಈಗ ಶ್ರಿಯಾರನ್ನು ಪಟಾಯಿಸುತ್ತಿರುವ ಸುದ್ದಿ ಬಾಲಿವುಡ್‌ನಲ್ಲಿ ಬ್ಲಾಸ್ಟ್ ಆಗಿದೆ.
'ಗಲ್ಲಿ ಗಲ್ಲಿ ಮೇ ಚೋರ್ ಹೈ' ಚಿತ್ರದಲ್ಲಿ ಇಬ್ಬರೂ ಅಭಿನಯಿಸುತ್ತಿದ್ದು ಇವರಿಬ್ಬರ ಪ್ರೇಮ ಪ್ರಣಯ ತೆರೆಗಷ್ಟೇ ಸೀಮಿತವಾಗಿರದೆ ಹೊರಕ್ಕೂ ಇಣುಕಿದೆ. ಭೂಪಾಲ್‌ನಲ್ಲಿ ಇವರಿಬ್ಬರೂ ಜೊತೆ ಜೊತೆಯಲ್ಲಿ ಸುತ್ತಾಡಿದ್ದು, ಕಣ್ಣಾಮುಚ್ಚಾಲೆ ಆಡಿದ್ದು ಜೂಟ್ ಹೇಳಿದ್ದು ಎಲ್ಲಾ ಗುಟ್ಟು ರಟ್ಟಾಗಿದೆ.
ಈಗಾಗಲೆ ಶ್ರಿಯಾಗೆ ಕ್ರಿಕೆಟಿಗೆ ಶ್ರೀಶಾಂತ್ ಬೌಲಿಂಗ್ ಮಾಡಿ ಮಾಡಿ ಸುಸ್ತಾಗಿದ್ದಾನೆ. ವಿಕೆಟ್ ಮಾತ್ರ ಬೀಳಲಿಲ್ಲ. ಇನ್ನೊಂದು ಕಡೆ ಸಲ್ಮಾನ್ ಖಾನ್ ಶರ್ಟ್ ತೆಗೆದು ಪ್ಯಾಂಟ್ ಹರಿದುಕೊಂಡರೂ ನಯಾಪೈಸೆ ಪ್ರಯೋಜನವಾಗಲಿಲ್ಲ. ಈಗ ಶ್ರಿಯಾ ಮೇಲೆ ಅಕ್ಷಯ್ ಖನ್ನಾ ಕಣ್ಣು ಬಿದ್ದಿದೆ. ಯಾವ ಹೂವು ಯಾರ ಮುಡಿಗೋ!? (ಏಜೆನ್ಸೀಸ್)
More from Filmibeat
English summary
Akshaye Khanna, who is rarely in news, in or out of screen is back in action. Akshaye Khanna is reportedly being linked with his Gali Gali Mein Chor Hai co-star Shreya Saran.


Click it and Unblock the Notifications











