»   » ಮೂಡಲ ಮನೆ ಅಜ್ಜಿಗೆ ನೆರವು ನೀಡಲು ಸಂಪರ್ಕಿಸಿ

ಮೂಡಲ ಮನೆ ಅಜ್ಜಿಗೆ ನೆರವು ನೀಡಲು ಸಂಪರ್ಕಿಸಿ

Subscribe to Filmibeat Kannada

ಸವದತ್ತಿ, ಜೂ.21: ಹಿರಿಯ ರಂಗಭೂಮಿ ಕಲಾವಿದೆ ರೇಣುಕಮ್ಮ ಮುರಗೋಡ ಅವರ ದೇಹಾರೋಗ್ಯ ಸ್ಥಿತಿಯ ಬಗ್ಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಸುದ್ದಿ ಓದಿ ಅನೇಕರು ನೆರವು ನೀಡಲು ಮುಂದಾಗಿದ್ದಾರೆ. ಕಲಾವಿದೆ ರೇಣುಕಮ್ಮ ಅವರ ಸಂಪರ್ಕ ವಿಳಾಸ ನೀಡಲಾಗಿದ್ದು, ಸಹಾಯ ಹಸ್ತ ನೀಡಲು ಕೋರಲಾಗಿದೆ.

ಹಿರಿಯ ಕಲಾವಿದೆ ರೇಣುಕಮ್ಮ ಅವರ ಆರೋಗ್ಯ ಸ್ಥಿತಿ ಶುಕ್ರವಾರ ರಾತ್ರಿಯಿಂದ ಕೊಂಚ ಸುಧಾರಿಸಿದೆ. ಅನ್ನಾಹಾರ ತ್ಯಜಿಸಿದ್ದ ರೇಣುಕಮ್ಮ ಅವರು ಈಗ ಚಹಾ, ಗಂಜಿ ಕುಡಿಯುತ್ತಿದ್ದಾರೆ. ಸ್ಥಳೀಯ ವೈದ್ಯರು ಉತ್ತಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ, ಇನ್ನಷ್ಟು ದಿನ ನಮ್ಮ ಜತೆ ಇರುತ್ತಾರೆ ಎಂದಿದ್ದಾರೆ.

ಚಲನಚಿತ್ರ, ಕಿರುತೆರೆ, ರಂಗಭೂಮಿಗಳಲ್ಲಿ ಹೆಸರುವಾಸಿಯಾಗಿರುವ ರೇಣುಕಮ್ಮ ಅವರ ಆರೋಗ್ಯ ಸುಧಾರಣೆಗೆ ಸಹಾಯ ನೀಡಲು ಬಯಸುವವರು ಕೆಳಗಿನ ಸಂಪರ್ಕ ವಿಳಾಸವನ್ನು ಬಳಸಬಹುದು ಎಂದು ಅವರ ಮಗ ನಟ ಬಸವರಾಜ ಮುರಗೋಡ ಹೇಳಿದ್ದಾರೆ.

ರೇಣುಕಮ್ಮ ಮುರಗೋಡ
ಮುರಗೊಡ ಅಂಚೆ
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ

ದೂರವಾಣಿ: (08337)265547
ಬ್ಯಾಂಕ್ ಖಾತೆ ನಂ. ಕಾರ್ಪೋರೇಶನ್ ಬ್ಯಾಂಕ್ ಮುರಗೋಡ
S B No: 4248

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada