For Quick Alerts
  ALLOW NOTIFICATIONS  
  For Daily Alerts

  ಜೇಮ್ಸ್ ಕ್ಯಾಮರೂನ್ ಭೇಟಿ ಮಾಡಿದ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ

  By Rajendra
  |

  ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈಗೆ ಅಪೂರ್ವ ಅವಕಾಶವೊಂದು ಸಿಕ್ಕಿದೆ. ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರನ್ನು ಅಬು ಧಬಿಯಲ್ಲಿ ಭೇಟಿ ಮಾಡಿದ್ದಾರೆ. ಮೊದಲ ಭೇಟಿಯಲ್ಲೇ ಜೇಮ್ಸ್ ಕ್ಯಾಮರೂನ್‌ಗೆ ಲಕ್ಷ್ಮಿ ರೈ ಸಖತ್ ಇಷ್ಟವಾಗಿದ್ದು ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಭರವಸೆಯನ್ನು ನೀಡಿದ್ದಾರಂತೆ.

  ಮಲಯಾಳಂ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಲಕ್ಷ್ಮಿ ರೈ ಅಬು ಧಬಿಗೆ ಹೋಗಿದ್ದರು. ಜೇಮ್ಸ್ ಕ್ಯಾಮರೂನ್ ಅವರನ್ನು ಭೇಟಿ ಮಾಡುವ ಅವಕಾಶ ಇವರ ಚಿತ್ರತಂಡಕ್ಕೆ ಸಿಕ್ಕಿದೆ. ಇಂಟರ್‌ನೆಟ್‌ನಲ್ಲಿ ಲಕ್ಷ್ಮಿ ರೈ ಬಗ್ಗೆ ವಿವರಗಳನ್ನು ತಿಳಿದುಕೊಂಡ ಕ್ಯಾಮರೂನ್ ತನ್ನ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ ಲಕ್ಷ್ಮಿ ರೈ ಪರಿಸ್ಥಿತಿ.

  ಈ ಸಂಬಂಧ ಮಾತುಕತೆ ನಡೆಸಲು ಲಕ್ಷ್ಮಿ ರೈ ಶೀಘ್ರದಲ್ಲೆ ಯುಎಸ್‌ ವಿಮಾನ ಹತ್ತಲಿದ್ದಾರೆ. ನಮ್ಮ ಬೆಳಗಾವಿ ಸುಂದರಿಗೆ ಜೇಮ್ಸ್ ಕ್ಯಾಮರೂನ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಗಲಿ ಎಂದು ಹಾರೈಸೋಣ. ಹಾಲಿವುಡ್‌ನಲ್ಲಿ ಅವರ ಪಯಣ ಮುದುವರಿಯಲಿ ಎಂಬ ವಿಶ್ವಾಸದೊಂದಿಗೆ.

  English summary
  Belgaum beauty Lakshmi Rai recently met world famous legendary director James Cameron at Abu Dhabi. The buzz is that James has taken a liking to Laxmi and if all goes well then she might be seen in one of his future projects. Sources says that Laxmi is expected to travel to the US for discussions with James.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X