ಗುಟ್ಟಾಗಿ 'ಎಕೆ 56' ನೋಡಿಲು ಹೋಗಿದ್ದರೇ ದರ್ಶನ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಚ್ಚಿ ಬಿದ್ದಿದ್ದಾರಾ? ಹೌದು ಎನ್ನುತ್ತಿವೆ ಗಾಂಧಿನಗರದ ಸುದ್ದಿ ಮೂಲಗಳು. ಕಾರಣ ಸ್ವಲ್ಪ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಓಂ ಪ್ರಕಾಶ್ ರಾವ್ ನಿರ್ದೇಶನದ ಎಕೆ 56 ಚಿತ್ರ. ದರ್ಶನ್ ನಾಯಕತ್ವದಲ್ಲಿ ಇದೇ ಓಂ ಪ್ರಕಾಶ್ ರಾವ್ 'ಕಲಾಸಿಪಾಳ್ಯ' ಮಾಡಿ ಗೆಲ್ಲಿಸಿದ್ದರು.
ಈಗ ಬರೋಬ್ಬರಿ 12 ಕೋಟಿ ಸುರಿದು ನಾಯಕನಟರಾಗಿ ಎಕೆ 56 ಚಿತ್ರದಲ್ಲಿ ನಟಿಸಿದ್ದಾರೆ ಸಿದ್ಧಾಂತ್. ಚಿಂಗಾರಿ ಚಿತ್ರದಷ್ಟೇ ಶ್ರೀಮಂತವಾಗಿದೆ ಈ ಸಿದ್ಧಾಂತ್ ನಿರ್ಮಾಣದ ಎಕೆ 56. ಶಿರಿನ್ ಹಾಗೂ ಸಿದ್ಧಾಂತ್ ಜೋಡಿಯನ್ನು ಜನ ನಿಧಾನವಾಗಿ ಇಷ್ಟಪಡುತ್ತಿದ್ದು ಚಿತ್ರಮಂದಿರಕ್ಕೆ ಬರಲು ಪ್ರಾರಂಭಿಸಿದ್ದಾರೆ. ಸಹಜವಾಗಿ ಚಿತ್ರತಂಡ ಖುಷಿಯಾಗಿದೆ.
ಆದರೆ ಇದೇ ಕಾರಣಕ್ಕೆ ದರ್ಶನ್ ಗಾಬರಿಬಿದ್ದು ಈ ಚಿತ್ರವನ್ನು ಗುಟ್ಟಾಗಿ ನೋಡಿ ಹೋಗಿದ್ದಾರೆ ಎನ್ನುತ್ತಿವೆ ಸುದ್ದಿಮೂಲಗಳು. ಕಲಾಸಿಪಾಳ್ಯ ಹಾಗೂ ಅಯ್ಯ ಬಿಟ್ಟರೆ ದರ್ಶನ್-ಓಂ ಪ್ರಕಾಶ್ ರಾವ್ ಜೋಡಿಯ ಯಾವ ಚಿತ್ರವೂ ಹೇಳಿಕೊಳ್ಳುವಂತ ಯಶಸ್ಸು ಪಡೆದಿಲ್ಲ. ಈಗ ಈ ಚಿತ್ರ ಯಶಸ್ವಿಯಾಗುವುದೋ ಏನೋ?
ಹಬ್ಬಿರುವ ಸುದ್ದಿ ಏನೇ ಇರಲಿ, ದರ್ಶನ್ ಮತ್ತು ಓಂ ಇಬ್ಬರೂ ಆಗಿನಿಂದ ಈಗಿನವರೆಗೂ ಆತ್ಮೀಯರು. ಹೀಗಿರುವಾಗ ಕದ್ದು ಹೋಗುವುದೇನು ಬಂತು. ಓಂ ಕರೆದಿದ್ದಾರೆ, ದರ್ಶನ್ ಹೋಗಿ ನೋಡಿ ಬಂದಿದ್ದಾರೆ. ಇವೆಲ್ಲಾ ಕೇವಲ ಪಬ್ಲಿಸಿಟಿ ಗಿಮಿಕ್ ಅನ್ನುತ್ತಿದ್ದಾರೆ ಎಲ್ಲವನ್ನೂ ಬಲ್ಲವರಂತೆ ಮಾತನಾಡುವ ಗಾಂಧಿನಗರದ ಬಹಳಷ್ಟು ಪಂಡಿತರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











