For Quick Alerts
  ALLOW NOTIFICATIONS  
  For Daily Alerts

  ಪ್ರಚಂಡ ರಾವಣ ಈ ವಾರ ರಾಜ್ಯದಲ್ಲಿ ತೆರೆಗೆ

  By Staff
  |

  ವಜ್ರಮುನಿ ಅವರಿಗೆ ಕೀರ್ತಿತಂದ'ರಾವಣ'ನ ಪಾತ್ರ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ. ಜನರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ ಎಂಬ ನಂಬಿಕೆ ನನಗೆ ಇದೆ. ಚಿತ್ರ ಚೆನ್ನಾಗಿ ಬಂದಿದೆ ಎಂದು ಡೈನಾಮಿಕ್ ಹೀರೊ ದೇವರಾಜ್ ಸುದ್ದ್ದಿಗಾರರಿಗೆ ಹೇಳಿದರು. ಪ್ರಚಂಡ ರಾವಣ ಚಿತ್ರ ಈವಾರ ರಾಜ್ಯದಲ್ಲಿ ತೆರೆಕಾಣಲು ಸಿದ್ಧವಾಗಿದೆ.

  ಪೌರಾಣಿಕ ಚಿತ್ರಕ್ಕೆ ಡಿಜಿಟಲ್ ಸ್ಪರ್ಶನೀಡಲಾಗಿದೆ. ವಸ್ತ್ರವಿನ್ಯಾಸ, ಸೆಟ್ಟಿಂಗ್ ನಲ್ಲೂ ವಿಶೇಷ ಗಮನಹರಿಸಿ ಚಿತ್ರವನ್ನು ತೆಗೆದಿದ್ದೇವೆ. ಜನರಿಗೆ ಚಿತ್ರ ಮೆಚ್ಚುಗೆಯಾಗಲಿದೆ ಎಂಬ ಆಶಾವಾದವನ್ನು ನಿರ್ದೇಶಕ ಪ್ರಸಾದ್ ವ್ಯಕ್ತಪಡಿಸಿದರು. ನಟಿ ರಾಜೇಶ್ವರಿ, ನಿರ್ಮಾಪಕರಾದ ಲೋಕೇಶ್ ಹಾಗೂ ಗಿರೀಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

  ನನ್ನ ಗುರು ಉದಯ್ ಕುಮಾರ್ ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಮಾಡಿದ ಆಂಜನೇಯನ ಪಾತ್ರವೇ ನನಗೆ ಸ್ಫೂರ್ತಿಎಂದ ಭರತ್ ಭಾಗವತರ್, ವಿಶೇಷವಾಗಿ ಮಕ್ಕಳಿಗೆ ಆಂಜನೇಯನ ಪಾತ್ರ ಇಷ್ಟವಾಗಲಿದೆ ಎಂದರು.

  ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರು ಸೃಷ್ಟಿಸಿದ "ಪ್ರಚಂಡರಾವಣ" ಕೃತಿ. ನಾಟಕ ರೂಪ ತಾಳಿ, ನಟ ವಜ್ರಮುನಿ ಅವರಿಗೆ ಅಪಾರ ಯಶಸ್ಸು, ಕೀರ್ತಿಯನ್ನು ತಂದುಕೊಟ್ಟಿತ್ತು.ಈಗಾಗಲೇ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಪಡೆದ ಈ ಅಮೋಘ ದೃಶ್ಯ ವೈಭವವನ್ನು ಪುನಃ ತೆರೆಗೆ ತರುವುದು ಸಾಹಸವೇ ಸೈ. ಬಹುಶಃ ವಜ್ರಮುನಿ ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ನಾನು ಈ ಪಾತ್ರ ನಿರ್ವಹಿಸಲು ಹಿಂಜರಿಯುತ್ತಿದ್ದೆ. ಆದರೆ ಅಭಿಮಾನಿಗಳ ಆಯ್ಕೆ ನನ್ನ ಕಡೆಗೆ ಸೂಚಿತವಾದದ್ದು ನನ್ನ ಪುಣ್ಯ.(ಎಸ್ ಎಂಎಸ್ ಮೂಲಕ ರಾವಣ ಪಾತ್ರಧಾರಿಯ ಆಯ್ಕೆ ನಡೆದಿದ್ದು ವಿಶೇಷ) ನಿರ್ದೇಶಕ ಪ್ರಸಾದ್ ಹಾಗೂ ಪ್ರಚಂಡ ರಾವಣ ಚಿತ್ರ ತಂಡದ ನಿರಂತರ ಬೆಂಬಲದಿಂದ ನಾನು ಈ ಪಾತ್ರ ಮಾಡಲು ಸಾಧ್ಯವಾಯಿತು ಎಂದು ಪ್ರಾಂಜಲ ಮನಸ್ಸಿನಿಂದ ದೇವರಾಜ್ ಹೇಳಿದರು.

  (ದಟ್ಸ್ ಕನ್ನಡ ಸಿನಿ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X