ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು ಅಂದಿದ್ದ ಪವನ್

ಆದರೆ ಪವನ್ ತನ್ನ ಚಿತ್ರಕ್ಕಾಗಿ ಕಷ್ಟಪಡುತ್ತಿರುವ ಸುದ್ದಿ ಕೇಳಿ ಮನಸ್ಸಿಗೆ ಬೇಸರವೆನಿಸಿ ಸಹಾಯಕ್ಕೆ ಮುಂದಾಗಿದ್ದೇನೆ. ಹಲವು ನಾಯಕರ ಬಳಿ ಹೋದರೂ, ಲೂಸಿಯಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಆದರೆ ನಾನೀಗ ಕಡಿಮೆ ಸಂಭಾವನೆಗೇ ನಟಿಸುತ್ತಿದ್ದೇನೆ. ನನ್ನನ್ನು ಮೊದಲು ಸಂಪರ್ಕಿಸಿಲ್ಲ ಎಂಬ ಬಗ್ಗೆ ನನಗೆ ಬೇಸರವಿಲ್ಲ. ನಾನು ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನಷ್ಟೇ ನಾನು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ" ಎಂದಿದ್ದಾರೆ ದಿಗಂತ್.
ದಿಗಂತ್ ಈ ಮಾತುಗಳು ನಿಜಕ್ಕೂ ಶ್ಲಾಘನೀಯ. ಪವನ್ ರಂಥ ನಿರ್ದೇಶಕರು ಚಿತ್ರರಂಗಕ್ಕೆ ಬೇಕು ಎಂಬ ದಿಗಂತ್ ಮಾತಿಗಿಂತ ದಿಗಂತ್ ರಂಥ ನಟರು ಕನ್ನಡಕ್ಕೆ ಬೇಕು ಎನ್ನುವುದು ಹೆಚ್ಚು ಸೂಕ್ತ. ಏರಿದ ಏಣಿಯನ್ನು ಒದೆಯವವರೇ ಜಾಸ್ತಿ ಇರುವ ಚಿತ್ರರಂಗದಲ್ಲಿ ದಿಗಂತ್ ವಿಭಿನ್ನ ಎನಿಸುತ್ತಾರಲ್ಲವೇ? 'ನಟ-ನಿರ್ದೇಶಕರ ನಡುವಿನ ಸಂಬಂಧ, ಪವನ್-ದಿಗಂತ್ ಅವರಂತಿರಲಿ' ಎಂಬ ಮಾತು ಚಿತ್ರರಂಗದಲ್ಲಿ ಚಾಲ್ತಿಗೆ ಬಂದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actor Diganth Acts in upcoming movie of director Lifu Ishtene Pawan Kumar movie, Loosiya.


Click it and Unblock the Notifications











