ತ್ರಿಡಿಯಲ್ಲಿ ವೀರ ಕೇಸರಿ, ಕಸ್ತೂರಿ ನಿವಾಸ, ಬಬ್ರು ವಾಹನ

ಈ ಚಿತ್ರಗಳನ್ನು ವಿಶ್ವದ ಎಲ್ಲ ಭಾಷೆಗಳಿಗೂ ಡಬ್ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೂ ಕೆಸಿಎನ್ ಸಂಸ್ಥೆ ಕೈಹಾಕಿದೆ. ಕೆಸಿಎನ್ ಗೌಡ ಅವರ ಯೋಜನೆ ಸಾಕಾರವಾದರೆ ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ಹೊಸ ದಾಖಲೆ ಎನ್ನಬಹುದು.
ಬಬ್ರುವಾಹನ ಚಿತ್ರಕ್ಕೆ ಈಗಾಗಲೆ ತ್ರಿಡಿ ಸ್ಪರ್ಶ ನೀಡಲಾಗುತ್ತಿದ್ದ್ದು ಸುಮಾರು .8.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ನಾಲ್ಕು ಸಿನಿಮಾಗಳಿಗೆ ತ್ರಿಡಿ ಸ್ಪರ್ಶ ನೀಡಲು ರು.35ರಿಂದ 40 ಕೋಟಿ ಖರ್ಚಾಗುತ್ತದೆಂದು ಅಂದಾಜು ಮಾಡಲಾಗಿದೆ. ತ್ರಿಡಿ ನಿರ್ದೇಶಕ ವಿ ರಾಜು ಅವರ ಸಮ್ಮುಖದಲ್ಲಿ 'ಬಬ್ರುವಾಹನ' ಚಿತ್ರಕ್ಕೆ ತ್ರಿಡಿ ರೂಪ ನೀಡಲಾಗುತ್ತಿದೆ.
ಈ ಚಿತ್ರಗಳ ಪ್ರದರ್ಶನಕ್ಕೆ ತಮ್ಮದೇ ಒಡೆತನದ ನವರಂಗ್ ಚಿತ್ರಮಂದಿರವನ್ನು ತ್ರಿಡಿಯಾಗಿ ಬದಲಾಯಿಸಲಾಗುತ್ತಿದೆ. ಈ ಚಿತ್ರಗಳ ಪ್ರದರ್ಶನಕ್ಕೆ ತ್ರಿಡಿ ಪ್ರಾಜೆಕ್ಟರನ್ನು ತರಿಸಲಾಗಿದ್ದು 12 ವರ್ಶನ್ ಸೌಂಡ್ ಟ್ರ್ಯಾಕ್ಸ್ ಕೂಡ ಅಳವಡಿಸಲಾಗುತ್ತಿದೆ. ಈ ಭಾರಿ ಬಜೆಟ್ ಯೋಜನೆ ಕೆಸಿಎನ್ ಗೌಡರಿಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತದೋ ಕಾದು ನೋಡಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











