twitter
    For Quick Alerts
    ALLOW NOTIFICATIONS  
    For Daily Alerts

    ತ್ರಿಡಿಯಲ್ಲಿ ವೀರ ಕೇಸರಿ, ಕಸ್ತೂರಿ ನಿವಾಸ, ಬಬ್ರು ವಾಹನ

    By Rajendra
    |

    A still from Kasturi Nivasa
    ವರನಟ ಡಾ.ರಾಜ್ ಕುಮಾರ್ ಅವರ 'ವೀರ ಕೇಸರಿ', 'ಕಸ್ತೂರಿ ನಿವಾಸ', 'ಬಬ್ರುವಾಹನ' ಹಾಗೂ 'ಕವಿರತ್ನ ಕಾಳಿದಾಸ' ಚಿತ್ರಗಳು ಇನ್ನು ಮುಂದೆ ತ್ರಿಡಿಯಲ್ಲಿ ನೋಡಿ ಸವಿಯಬಹುದು. ಈಗಾಗಲೆ ಈ ಚಿತ್ರಗಳಿಗೆ ಕೆಸಿಎನ್ ಸಂಸ್ಥೆ ತ್ರಿಡಿ ಸ್ಪರ್ಶ ನೀಡುವುದನ್ನು ಸದ್ದುಗದ್ದಲವಿಲ್ಲದಂತೆ ಆರಂಭಿಸಿದೆ.

    ಈ ಚಿತ್ರಗಳನ್ನು ವಿಶ್ವದ ಎಲ್ಲ ಭಾಷೆಗಳಿಗೂ ಡಬ್ ಮಾಡುವ ಮಹತ್ವಾಕಾಂಕ್ಷಿ ಯೋಜನೆಗೂ ಕೆಸಿಎನ್ ಸಂಸ್ಥೆ ಕೈಹಾಕಿದೆ. ಕೆಸಿಎನ್ ಗೌಡ ಅವರ ಯೋಜನೆ ಸಾಕಾರವಾದರೆ ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ಹೊಸ ದಾಖಲೆ ಎನ್ನಬಹುದು.

    ಬಬ್ರುವಾಹನ ಚಿತ್ರಕ್ಕೆ ಈಗಾಗಲೆ ತ್ರಿಡಿ ಸ್ಪರ್ಶ ನೀಡಲಾಗುತ್ತಿದ್ದ್ದು ಸುಮಾರು .8.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ನಾಲ್ಕು ಸಿನಿಮಾಗಳಿಗೆ ತ್ರಿಡಿ ಸ್ಪರ್ಶ ನೀಡಲು ರು.35ರಿಂದ 40 ಕೋಟಿ ಖರ್ಚಾಗುತ್ತದೆಂದು ಅಂದಾಜು ಮಾಡಲಾಗಿದೆ. ತ್ರಿಡಿ ನಿರ್ದೇಶಕ ವಿ ರಾಜು ಅವರ ಸಮ್ಮುಖದಲ್ಲಿ 'ಬಬ್ರುವಾಹನ' ಚಿತ್ರಕ್ಕೆ ತ್ರಿಡಿ ರೂಪ ನೀಡಲಾಗುತ್ತಿದೆ.

    ಈ ಚಿತ್ರಗಳ ಪ್ರದರ್ಶನಕ್ಕೆ ತಮ್ಮದೇ ಒಡೆತನದ ನವರಂಗ್ ಚಿತ್ರಮಂದಿರವನ್ನು ತ್ರಿಡಿಯಾಗಿ ಬದಲಾಯಿಸಲಾಗುತ್ತಿದೆ. ಈ ಚಿತ್ರಗಳ ಪ್ರದರ್ಶನಕ್ಕೆ ತ್ರಿಡಿ ಪ್ರಾಜೆಕ್ಟರನ್ನು ತರಿಸಲಾಗಿದ್ದು 12 ವರ್ಶನ್ ಸೌಂಡ್ ಟ್ರ್ಯಾಕ್ಸ್ ಕೂಡ ಅಳವಡಿಸಲಾಗುತ್ತಿದೆ. ಈ ಭಾರಿ ಬಜೆಟ್ ಯೋಜನೆ ಕೆಸಿಎನ್ ಗೌಡರಿಗೆ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತದೋ ಕಾದು ನೋಡಬೇಕು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    KCN Gowda, Dada Saheb Phalke Academy honored giant of Kannada cinema intends to bring Dr.Rajkumar's Veera Kesari, Kasthuri Nivasa, Kavirathna Kalidasa and Babruvahana in 3D Technology with 4K resolution and 12 points sound system at a cost of Rs.40 crores.
    Thursday, July 21, 2011, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X