ತಪೋಭೂಮಿ ಹಿಮಾಲಯಕ್ಕೆ ನಟ ರಜನಿಕಾಂತ್!

By Rajendra

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆಗಾಗ ಮಾನಸಿಕ ನೆಮ್ಮದಿಯನ್ನು ಅರಸಿ ತಪೋಭೂಮಿ ಹಿಮಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಈಗ ಅವರು ಬಹುನಿರೀಕ್ಷಿತ ಚಿತ್ರ'ಎಂಧಿರನ್' ಬಿಡುಗಡೆಗೂ ಮುನ್ನ ಹಿಮಾಲಯದ ದಿವ್ಯ ಸನ್ನಿಧಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನಿಸಿಕೊಂಡಿರುವ "ಎಂಧಿರನ್" ಅಕ್ಟೋಬರ್ 1 ರಂದು ದೇಶದಾದ್ಯಂತ ಮೂರು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಈಗಾಗಲೆ ಸೆನ್ಸಾರ್ 'ಯು 'ಪ್ರಮಾಣ ಪತ್ರ ಪಡೆದಿರುವ ಈ ಚಿತ್ರ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿಶ್ವದಾದ್ಯಂತ 3000 ತೆರೆಗಳ ಮೇಲೆ ಪ್ರದರ್ಶನ ಕಾಣಲಿರುವ ಈ ಚಿತ್ರ 2250 ಪ್ರಿಂಟ್ ಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ರಸೂಲ್ ಪೂಕುಟ್ಟಿಯಂತಹ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಯಶಸ್ವಿ ನಿರ್ದೇಶಕ ಎಂದೇ ಖ್ಯಾತನಾದ ಶಂಕರ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿರುವ ಕಾರಣ ಸಹಜವಾಗಿ ನಿರೀಕ್ಷೆಗಳು ಮುಗಿಲು ಮುಟ್ಟಿವೆ. ಸೋಮವಾರವಷ್ಟೆ (ಸೆ.20) ಚಿತ್ರದ ಧ್ವನಿಮಿಶ್ರಣ ಕೆಲಸ ಮುಗಿದಿದೆ.

ಚಿತ್ರ ಅಕ್ಟೋಬರ್ 1ರಂದು ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಯಾರ ಕೈಗೂ ಸಿಗುತ್ತಿಲ್ಲ. ಚಿತ್ರದ ಮೊದಲ ಪ್ರತಿ ಬಂದ ಕೂಡಲೆ ಅವರು ಹಿಮಾಲಯದ ದಿವ್ಯ ಸನ್ನಿಧಿಗೆ ತೆರಳಲಿದ್ದಾರೆ. ತಮ್ಮ ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ರಜನಿ ಹೀಗೆ ಹಿಮಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಒಂದು ತಿಂಗಳ ಹಿಮಾಲಯದಲ್ಲಿ ಕಳೆದು ಬಳಿಕ ನವೆಂಬರ್ ನಲ್ಲಿ ಚೆನ್ನೈಗೆ ಹಿಂದಿರುಗಲಿದ್ದಾರೆ ಎನ್ನುತ್ತವೆ ಮೂಲಗಳು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X