»   » ಪರ್ಯಾಯ ಸಿನೆಮಾ ಪ್ರಬಂಧ ಸ್ಪರ್ಧೆವಿಜೇತರು

ಪರ್ಯಾಯ ಸಿನೆಮಾ ಪ್ರಬಂಧ ಸ್ಪರ್ಧೆವಿಜೇತರು

Subscribe to Filmibeat Kannada

ಸಂವಾದ.ಕಾಂ ತುಮಕೂರು ಬಳಿಯ ದೇವರಾಯನದುರ್ಗದಲ್ಲಿ ಹಮ್ಮಿಕೊಂಡಿರುವ ಗಿರೀಶ್ ಕಾಸರವಳ್ಳಿ ಗೌರವಾರ್ಥ ಕನ್ನಡದ ಪರ್ಯಾಯ ಸಿನಿಮಾದ ಪರಂಪರೆಯನ್ನ ನೆನಪಿಸುವ ಎರಡು ದಿನಗಳ ಚಲನಚಿತ್ರ ರಸಗ್ರಹಣ-ಚಿಂತನಾ ಕೂಟದ ಅಂಗವಾಗಿ 'ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ' ಎಂಬ ವಿಷಯದ ಮೇಲೆ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು.ಈ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳಿಂದ ಜನರು ಸ್ಪಂದಿಸಿದ್ದಾರೆ ಎಂದು ಸಂವಾದ ಡಾಟ್ ಕಾಂ ನ ಅರೇಹಳ್ಳಿ ರವಿ ಹೇಳಿದರು.

ಈ ಸ್ಪರ್ಧೆಯ ಫಲಿತಾಂಶ ಹೊರಬಂದಿದೆ. ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ತಲಾ ಇಬ್ಬರು ಹಂಚಿಕೊಂಡಿದ್ದಾರೆ. ಮೊದಲನೇ ಬಹುಮಾನವನ್ನು ಚರಣ್ ರಾಜ್ ಹಾಗೂ ಮಹೇಶ್ ಅವರು ಹಾಗೂ ಎರಡನೇ ಬಹುಮಾನವನ್ನು ರಾಮಸ್ವಾಮಿ ಅರಸೀಕೆರೆ ಮತ್ತು ರವೀಂದ್ರ ಅವರು ಹಂಚಿಕೊಂಡಿದ್ದಾರೆ. ಸ್ಪರ್ಧೆಯ ವಿಜೇತರನ್ನು ನವೆಂಬರ್ 22 ಮತ್ತು 23ರಂದು ನಡೆಯಲಿರುವ ಸಮಾರಂಭಕ್ಕೆ ಆಹ್ವಾನಿಸಿ, ಬಹುಮಾನ ವಿತರಿಸಲಾಗುವುದು ಎಂದು ಸಂವಾದ.ಕಾಂನ ರವಿ ಹೇಳಿದರು.

*ಪ್ರಬಂಧದ ವಿಷಯದ ಕುರಿತು ಹೆಚ್ಚಿನ ವಿವರಗಳಿಗೆ ಅಥವಾ ಇನ್ಯಾವುದೇ ಸಂದೇಹಗಳಿದ್ದಲ್ಲಿ ಸಂಪರ್ಕಿಸಿ: 9901399671, 9731755966
*ಕಾಸರವಳ್ಳಿ ಗೌರವಾರ್ಥ ರಸಗ್ರಹಣ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವ ಇಚ್ಛೆಯಿದ್ದಲ್ಲಿ ಸಂವಾದ.ಕಾಂನ ವೆಬ್ ಪುಟಕ್ಕೆ ಭೇಟಿ ಕೊಡಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada