ಗೆಜ್ಜೆ ಹಾಡಿಗೆ ಮೈಲಾರಿ ಜೊತೆ ಹೆಜ್ಜೆ ಹಾಕಿದ ಸದಾ
ಕವಿರಾಜ್ ರಚಿಸಿರುವ 'ಘಲ್ಲು ಘಲ್ಲೆನ್ನುತಾ ಗೆಜ್ಜೆ ಘಲ್ಲುತಾ ಎನ್ನುತಾ ಮಲ್ಲಿಗೆ ಚೆಲ್ಲಿ ಹಾದಿಯಲಿ ಹಾಡುತಾ ಎಂಬ ಗೀತೆಯ ಚಿತ್ರೀಕರಣ ನಗರದ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಡೆಯಿತು. ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಅವರು ಅರ್ಪಿಸಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ 'ಮೈಲಾರಿ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಕಲಾ ನಿರ್ದೇಶಕ ಶಿವಕುಮಾರ್ ರವರು ಈ ಗೀತೆಯ ಚಿತ್ರೀಕರಣಕ್ಕಾಗಿ ಐದು ವಿವಿಧ ಸೆಟ್‌ಗಳನ್ನು ನಿರ್ಮಿಸಿದ್ದರು. ಶಿವರಾಜಕುಮಾರ್ ಹಾಗೂ ಸದಾ ಅಭಿನಯಿಸಿದ ಈ ಹಾಡಿನ ಚಿತ್ರೀಕರಣದಲ್ಲಿ ಸಾವಿರಕ್ಕೂ ಹೆಚ್ಚು ಸಹಕಲಾವಿದರು ಹಾಗೂ ನೂರು ಜನ ಬಾಂಬೆ ನೃತ್ಯಗಾರರು ಭಾಗವಹಿಸಿದ್ದರು. ಈ ಅದ್ದೂರಿ ಗೀತೆಗೆ ಅಂಥೋಣಿ ಪ್ರದೀಪ್ ನೃತ್ಯ ಸಂಯೋಜನೆ ಮಾಡಿದ್ದಾರೆ.
'ತಾಜ್‌ಮಹಲ್', 'ಪ್ರೇಮ್‌ಕಹಾನಿ' ಚಿತ್ರಗಳ ನಂತರ ಚಂದ್ರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆಯಿರುವ 'ಮೈಲಾರಿ'ಗೆ ಕೆ.ಎಸ್.ಚಂದ್ರಶೇಖರ್ ರವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿದೆ.
ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸದಾ, ರವಿಕಾಳೆ, ರಂಗಾಯಣರಘು, ಗುರುಪ್ರಸಾದ್(ಮಠ), ಜಾನ್‌ಕೊಕೇನ್, ಸುರೇಶ್‌ಮಂಗಳೂರು, ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ್, ಮೈಕೋನಾಗರಾಜ್, ಕುರಿ ಪ್ರತಾಪ್, ರಘುರಾಂ, ಕೋಟೆಪ್ರಭಾಕರ್, ವಿಶ್ವ ಮುಂತಾದವರಿದ್ದಾರೆ.


Click it and Unblock the Notifications











