ಗೋಲ್ಡನ್ ಸ್ಟಾರ್ ಗಣೇಶ್ 'ಮುಂಜಾನೆ'ಗೆ ದಾರಿ ಬಿಡಿ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಎಸ್ ನಾರಾಯಣ್ ಸಂಗಮದ 'ಮುಂಜಾನೆ' ಚಿತ್ರ ಮುಂದಿನ ತಿಂಗಳು ಮಾರ್ಚ್ ನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸಾಕಷ್ಟು ಚಿತ್ರಗಳು ಅದೇ ದಿನ ಬಿಡುಗಡೆಯನ್ನು ಘೋಷಿಸಿರುವ ಕಾರಣ, ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಂಭವ ಇಲ್ಲದಿಲ್ಲ. ಶೈಲೂ ನಂತರ ಗಣೇಶ್-ನಾಣಿ ಮ್ಯಾಜಿಕ್ ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದೆ.
ಗಣೇಶ್ ಜೊತೆ ನಾಯಕಿಯಾಗಿ ಮಂಜರಿ ಫಡ್ನೀಸ್ ಅಭಿನಯಿಸಿದ್ದಾರೆ. ಮುಂಜಾನೆ ಚಿತ್ರದ ಬಗ್ಗೆ ನಟ ಗಣೇಶ್ ಹಾಗೂ ನಿರ್ದೇಶಕ ನಾರಾಯಣ್ ಇಬ್ಬರಿಗೂ ಬಹಳಷ್ಟು ನಿರೀಕ್ಷೆಗಳಿವೆ. ಕಾರಣ, ಗಣೇಶ್ ಅಮೋಘ ನಟನೆ ಹಾಗೂ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಂಡು ಚಿತ್ರವನ್ನು ಮುಗಿಸಿರುವ ನಾರಾಯಣ್.
ಏನೇ ಆಗಲಿ, ಗಣೇಶ್ ರೇಸ್ ಮೊದಲಿನಂತಿಲ್ಲ. ನಾರಾಯಣ್ ಕೂಡ ಈಗ ಯಶಸ್ವಿ ನಿರ್ದೇಶಕರ ಸಾಲಿನಲ್ಲಿಲ್ಲ. ಆದರೆ ಇತ್ತೀಚಿಗೆ ಬಿಡುಗಡೆಯಾಗಿದ್ದ ಅವರಿಬ್ಬರ ಚಿತ್ರ ಶೈಲೂ ತುಂಬಾ ಚೆನ್ನಾಗಿದೆಯೆಂದು ವಿಮರ್ಶಕರ ಹಾಗೂ ಪ್ರೆಕ್ಷಕರ ಮೆಚ್ಚುಗೆ ಗಳಿಸಿತ್ತೆಂಬುದು ಇಬ್ಬರಿಗೂ ಇರುವ ಏಕೈಕ ಆಸರೆ. ಇದೀಗ ಮುಂಜಾನೆ ಬಿಡುಗಡೆ ಕಾಲ ಸಮೀಪಿಸಿದೆ. ಏನಾಗುತ್ತೋ ಕಾದು ನೋಡಬೇಕಷ್ಟೇ. (ಒನ್ ಇಂಡಿಯಾ ಕನ್ನಡ)


Click it and Unblock the Notifications











