ಗೋಲ್ಡನ್ ಗರ್ಲ್ ರಮ್ಯಾ ಸಂಭಾವನೆ ಸಿಕ್ಕಾಪಟ್ಟೆ ಏರಿಕೆ

By Rajendra

ಸ್ಯಾಂಡಲ್‌ವುಡ್‌‍ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ತಾರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವವರು ಗೋಲ್ಡನ್ ಗರ್ಲ್ ರಮ್ಯಾ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಇತ್ತೀಚೆಗೆ ಲೇಟೆಸ್ಟ್ ಕನ್ನಡ ಚಿತ್ರವೊಂದಕ್ಕೆ ಸಹಿಹಾಕಿರುವ ರಮ್ಯಾ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ. ಅದರ ಮೊತ್ತ ರು.32 ಲಕ್ಷ ಎನ್ನಲಾಗಿದೆ.

ಈ ಚಿತ್ರ ಬೇರಾವುದೂ ಅಲ್ಲ ಮುನಿರತ್ನ ನಿರ್ಮಿಸುತ್ತಿರುವ ಭಾರಿ ಬಜೆಟ್‌ ಚಿತ್ರ 'ಗಾಂಧಿನಗರ ಮಹಾತ್ಮೆ'. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮ್ ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಲಿರುವ ಚಿತ್ರ. ಉಪ್ಪಿ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18ರಂದು ಈ ಚಿತ್ರ ಸೆಟ್ಟೇರಲಿದೆ.

ಸದ್ಯಕ್ಕೆ ಉಪೇಂದ್ರ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು 'ಗಾಡ್ ಫಾದರ್' ಹಾಗೂ ಮತ್ತೊಂದು 'ಆರಕ್ಷಕ'. ಇನ್ನು ರಮ್ಯಾ ಕೂಡ 'ಸಂಜು ವೆಡ್ಸ್ ಗೀತಾ' ಹಾಗೂ 'ಜಾನಿ ಮೇರಾ ನಾಮ್' ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. 'ಜಾನಿ ಮೇರಾ ನಾಮ್' ಚಿತ್ರಕ್ಕೆ ರಮ್ಯಾ ಕೇವಲ ರು. 22 ಲಕ್ಷ ತೆಗೆದುಕೊಂಡು ಎನ್ನಲಾಗಿದೆ.

ಈಗ ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಏರಿಸಿಕೊಂಡು ರು.32 ಲಕ್ಷಕ್ಕೆ ತೂಗುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯಾಗಿ ಮತ್ತೊಮ್ಮೆ ಅವತರಿಸಿದ್ದಾರೆ. ಕನ್ನಡದಲ್ಲಿ ಪ್ರಿಯಾಮಣಿ ರು.25ರಿಂದ ರು.27ರವರೆಗೂ ಎಣಿಸುತ್ತಿದ್ದರೆ ಮಲ್ಲು ಬೆಡಗಿ ಭಾವನಾ ರು.15 ಲಕ್ಷಕ್ಕೆ ಸಹಿ ಹಾಕುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
She is undoubtedly the reigning female star of the Sandalowood circuit presently. The buzz is that Golden Girl Ramya has updated her fee and presently she commands a market price of Rs 32 lakhs per film. Reports are that Ramya will be paid Rs 32 lakhs for her upcoming film Gandhinagara Mahathme which stars Upendra and Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X