twitter
    For Quick Alerts
    ALLOW NOTIFICATIONS  
    For Daily Alerts

    ದಟ್ಸ್ ಕನ್ನಡ ಲೇಖನಕ್ಕೆ 'ಗನ್' ಹರೀಶ್ ರಾಜ್ ಪ್ರತಿಕ್ರಿಯೆ

    By Prasad
    |

    Actor Harish Raj rejoinder to smear campaign
    'ಗನ್' ಚಿತ್ರದ ಸೋಲಿನಿಂದಾಗಿ ಸಂತೋಷ್ ಚಿತ್ರಮಂದಿರವೇರಿ ಆತ್ಮಹತ್ಯೆಗೆ ಯತ್ನಿಸಿ ಸುದ್ದಿಗೆ ಗ್ರಾಸವಾಗಿದ್ದ ನಿರ್ದೇಶಕ, ನಿರ್ಮಾಪಕ, 'ಕಲಾವಿದ' ಹರೀಶ್ ರಾಜ್ ಅವರು, ತೀವ್ರ ಹಣಕಾಸಿನ ಸುಳಿಯಲ್ಲಿ ಸಿಲುಕಿದ್ದಾರೆ, ಹಣ ತೀರಿಸಲು ಕಿಡ್ನಿ, ಲೀವರ್ ಕೂಡ ಹರಾಜಿಗಿಡಲು ಸಿದ್ಧರಿದ್ದಾರೆ, ಬೆಟ್ಟದಷ್ಟಿರುವ ಸಾಲ ತೀರಿಸಲು ಕಾಲ್ ಸೆಂಟರ್ ಸೇರಿದ್ದಾರೆ ಎಂಬಿತ್ಯಾದಿ ಸುದ್ದಿ ಹಬ್ಬಿತ್ತು. ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಈ ಕುರಿತ ಸುದ್ದಿಗೆ ಹರೀಶ್ ರಾಜ್ ಸ್ಪಷ್ಟೀಕರಣ ನೀಡಿದ್ದಾರೆ.

    "ಇಂಥ ಅಂತೆ ಕಂತೆಗಳ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ಗನ್ ಚಿತ್ರದ ನಿರ್ಮಾಪಕ ಮುರಳಿ. ಆತ ನೊಂದಾಯಿತ ನಿರ್ಮಾಪಕನಲ್ಲ ಮತ್ತು ಫೈನಾನ್ಸರ್ ಅಲ್ಲ. ಗನ್ ಚಿತ್ರ ನಿರ್ಮಾಣವಾದದ್ದೇ ಹರೀಶ್ ರಾಜ್ ಬ್ಯಾನರ್ ಅಡಿಯಲ್ಲಿ. ಆತನಿಗೆ ನಾನು ಒಂದೇ ಒಂದು ಪೈಸೆಯನ್ನೂ ನೀಡಬೇಕಾಗಿಲ್ಲ. ನನ್ನ ಶ್ರೇಯಸ್ಸನ್ನು ಸಹಿಸದ 'ಹಾರಿಬಲ್' ನಿರ್ಮಾಪಕ ಮುರಳಿ ನನ್ನ ವಿರುದ್ಧ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾನೆ" ಎಂದು ಮೊಬೈಲ್ ಮಾತುಕತೆಯಲ್ಲಿ ತಿಳಿಸಿದರು.

    "ನಾನೊಬ್ಬ ಉತ್ತಮ ನಟ ಅಂತ ಎಲ್ಲರಿಗೂ ಗೊತ್ತು. ಹಿಂದೆ ಚಿತ್ರಗಳು ಸೋತಿದ್ದರೂ ಕಲಾಸರಸ್ವತಿ ನನ್ನ ಕೈಬಿಟ್ಟಿಲ್ಲ. ಈಗಾಗಲೆ, ಗೋವಿಂದಾಯನಮಃ, ಚಾಲೇಂಜ್, ಭಾಷಾ ಸಿತಾರಾ ಮತ್ತು ಶ್ರೀಕ್ಷೇತ್ರ ಆದಿಚುಂಚನಗಿರಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಸಾಕಷ್ಟು ಡಿಮ್ಯಾಂಡ್ ಇದೆ. ಇಲ್ಲದ ಸಾಲ ತೀರಿಸಲು, ಲೇಖನದಲ್ಲಿ ಪ್ರಕಟವಾದಂತೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಬೇಕಿದ್ದರೆ ಕಾಲೇಜಿನ ಲೆಕ್ಚರರ್ ಕೆಲಸ ಸಿಗುವುದು ಕಷ್ಟವೇನಲ್ಲ. ಆದರೆ, ಅವಶ್ಯಕತೆಯಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.

    "ನಾನು ಚಿತ್ರರಂಗಕ್ಕೆ ಬಂದಿದ್ದು 1997ರಲ್ಲಿ. ಚಿತ್ರರಂಗದಲ್ಲಿ ಹಣಕಾಸಿನ ಸಹಾಯ ನೀಡುವುದು ಇಸಿದುಕೊಳ್ಳುವುದು, ಸೋಲು ಗೆಲುವು ಇದ್ದದ್ದೇ. ಕೆಲ ಚಿತ್ರಗಳು ಸೋತಿದ್ದರೂ ದೇವರ ದಯೆಯಿಂದ ಚೆನ್ನಾಗಿದ್ದೇನೆ. ಚಿತ್ರದ ಸೋಲು ಮತ್ತಷ್ಟು ದುಡಿಯಲು ಪ್ರೇರೇಪಣೆ ನೀಡಿದೆ. ಇಂಥ ಸುಂದರವಾದ ಚಿತ್ರರಂಗವನ್ನು ಬಿಡುವ ಉದ್ದೇಶ ಖಂಡಿತ ಇಲ್ಲ. ನನ್ನನ್ನು ಚಿತ್ರರಂಗದಿಂದ ಪರ್ಮನೆಂಟಾಗಿ ತೊಲಗಿಸಲೆಂದು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇಂಥ ಸಂಚುಗಳಿಗೆ ನಾನು ಅವಕಾಶ ನೀಡುವುದಿಲ್ಲ" ಎಂದು ಹರೀಶ್ ಮನಸ್ಸನ್ನು ಬರಿದು ಮಾಡಿಕೊಂಡರು.

    English summary
    Kannada movie 'Gun' actor, director Harish Raj has given clarification to the article published in Oneindia-Kannada. Harish reiterates that he owes nothing to Gun producer Murali and there is no need to join call centre to repay the loan money. He says, a smear campaign is being launched to oust him from Kannada film industry.
    Monday, November 21, 2011, 12:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X