'ಕಾಳಿದಾಸ ಕನ್ನಡ ಮೇಷ್ಟ್ರು' ಶಾಲೆ ಸೇರಿದ 21 ನಟಿಯರು

ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಕಾಳಿದಾಸ ಕನ್ನಡ ಮೇಷ್ಟ್ರು' ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಇಲ್ಲಿ ಕನ್ನಡ ಮೇಷ್ಟ್ರಾಗಿ ನವರಸನಾಯಕ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಇದರ ಜೊತೆಗೀಗ ಕನ್ನಡ ಮೇಷ್ಟ್ರ ಪಾಠ ಕೇಳಲು ಕನ್ನಡದ 21 ನಟಿಮಣಿಯರು ಶಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಚಿತ್ರದ ಒಂದು ಹಾಡಿನಲ್ಲಿ 21 ನಟಿಮಣಿಯರು ಹೆಜ್ಜೆ ಹಾಕಿದ್ದಾರಂತೆ. ನಿರ್ದೇಶಕ ಕವಿರಾಜ್ ಇಂತಹ ಒಂದು ವಿಭಿನ್ನ ಪ್ರಮೋಷನ್ ಪ್ಲಾನ್ ಮಾಡಿದ್ದಾರೆ. ಈ ಹಾಡನ್ನು ಚಿತ್ರದ ಪ್ರಮೋಷನ್ ಗಾಗಿ ಬಳಸುತ್ತಿದ್ದಾರಂತೆ.

ಒಂದು ಹಾಡಿನಲ್ಲಿ ಹೆಚ್ಚು ಅಂದರೆ ನಾಲ್ಕರಿಂದ ಐದು ನಾಯಕಿಯರು ಕಾಣಿಸಿಕೊಳ್ಳಬಹುದು ಆದ್ರೆ ಈ ಸಿನಿಮಾದಲ್ಲಿ ಬರೋಬ್ಬರಿ 21 ನಟಿಯರು ಹೆಜ್ಜೆ ಹಾಕಿರುವುದು ವಿಶೇಷ. ರಿಚಿತಾ ರಾಮ್, ಹರಿಪ್ರಿಯಾ, ಅಮೂಲ್ಯ, ಅದಿತಿ ಪ್ರಭುದೇವ, ನಿಶ್ವಿಕಾ ನಾಯ್ಡು, ಕೃಷಿ ತಾಪಂಡ, ರೂಪಿಕ, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಸಿಂಧು ಲೋಕನಾಥ್, ಶುಭಾ ಪೂಂಜ, ಸೋನು ಗೌಡ ಸೇರಿದಂತೆ ಅನೇಕ ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

 21 Heroines In Jaggesh Starrer Kalidasa Kannada Mestru Movie For A One Song

ಎಲ್ಲಾ ನಟಿಯರು ಕವಿರಾಜ್ ಕರೆಗೆ ಓಗೊಟ್ಟು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಹೆಜ್ಜೆ ಹಾಕಲು ಸಂತಸದಿಂದ ಒಪ್ಪಿಕೊಂಡಿದ್ದಾರಂತೆ. ಮೊದಲ ಬಾರಿಗೆ ಅನೇಕ ನಟಿಮಣಿಯರು ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದನ್ನು ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸಧ್ಯದಲೇ ಹಾಡನ್ನು ರಿಲೀಸ್ ಮಾಡಲಿದೆ.

 21 Heroines In Jaggesh Starrer Kalidasa Kannada Mestru Movie For A One Song

ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ಹಾಸ್ಯದ ಜೊತೆಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆಯು ಹೇಳಲಾಗಿದೆ. 90 ದಶಕದಲ್ಲಿ ಕನ್ನಡ ಮೇಷ್ಟ್ರು ಪರಿಸ್ಥಿತಿ ಹೇಗಿತ್ತು. ಅವರ ತೊಳಲಾಟಗಳೇನು ಎನ್ನುವುದನ್ನು ಈ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕವಿರಾಜ್. ಜಗ್ಗೇಶ್ ಗೆ ಇಲ್ಲಿ ನಾಯಕಿಯಾಗಿ ಮೇಘನಾ ಗಾಂವ್ಕರ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮುಂದಿನ ತಿಂಗಳು 15ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
21 heroines in one song for Jaggesh starrer Kalidasa Kannada mestru movie. This movie is directed by Kaviraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X