»   » ಶನಿವಾರ ಜೀ ಕನ್ನಡದಲ್ಲಿ ಜೋಗಿ ಬತ್ತಾವ್ವನಪ್ಪೋ !

ಶನಿವಾರ ಜೀ ಕನ್ನಡದಲ್ಲಿ ಜೋಗಿ ಬತ್ತಾವ್ವನಪ್ಪೋ !

Subscribe to Filmibeat Kannada

ಬೆಂಗಳೂರು, ಫೆಬ್ರವರಿ 21: ಕನ್ನಡಿಗರ ಕಣ್ಮಣಿ ಜೀ ಕನ್ನಡವಾಹಿನಿಯಲ್ಲಿ, ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ 'ಜೋಗಿ 'ಚಲನಚಿತ್ರ ಶನಿವಾರ ಫೆಬ್ರವರಿ 23ರಂದು ಸಂಜೆ 4 ಗಂಟೆಗೆ ಪ್ರಸಾರವಾಗಲಿದೆ. ಚಲನಚಿತ್ರದ ಪ್ರಸಾರಕ್ಕಿಂತ ಮೊದಲು ನಡೆಯುವ ನೇರ ಪ್ರಸಾರದಲ್ಲಿ ಜೋಗಿ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಶಿವರಾಜ್‌ಕುಮಾರ್, ಅರುಂಧತಿ ನಾಗ್, ನಿರ್ದೇಶಕ ಪ್ರೇಮ್ ಭಾಗವಹಿಸಲಿದ್ದಾರೆ.

2005ರಲ್ಲಿ ಬಿಡುಗಡೆಯಾದ ಪ್ರೇಮ್ ನಿರ್ದೇಶನದ ಈ ಚಲನಚಿತ್ರ ಬಿಡುಗಡೆಯಾದ ಮೊದಲವಾರದಲ್ಲೇ 1.62 ಕೋಟಿಯಷ್ಟು ಹಣ ಗಳಿಸಿ ದಾಖಲೆ ನಿರ್ಮಿಸಿತ್ತು. ಉತ್ತಮ ಅಭಿನಯ, ಉತ್ತಮ ಚಿತ್ರಕಥೆ ಪ್ರಶಸ್ತಿಗಳನ್ನು ತನ್ನ ಮಡಿಲಿಗೇರಿಸಿಕೊಂಡಿತ್ತು. ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಶಿವರಾಜ್‌ಕುಮಾರ್, ಅರುಂಧತಿನಾಗ್, ಜೆನ್ನಿಫರ್, ಆದಿ ಲೋಕೇಶ್ ಎಲ್ಲರ ಅಭಿನಯವೂ ಶ್ಲಾಘನೀಯ ರೀತಿಯಲ್ಲಿ ಮೂಡಿಬಂದಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಬ್ರೇಕ್ ದೊರಕಿಸಿಕೊಟ್ಟ ನಿರ್ದೇಶಕ ಪ್ರೇಮ್‌ ಪ್ರೇಕ್ಷಕರ ನಾಡಿ ಮಿಡಿತ ಅರಿತು, ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದಾರೆ. ಬಳುಕುವ ಬಳ್ಳಿ ಜೆನ್ನಿಫರ್‌ಗೆ ಸೂಪರ್ ಎಂಟ್ರಿ ನೀಡಿದ ಹಾಗೂ ಅಮ್ಮ ಮಗನ ಬಾಂಧವ್ಯ, ಪ್ರೀತಿ, ವಿರಹ, ಭೂಗತ ಜಗತ್ತಿನ ವ್ಯವಹಾರಗಳು, ಬಡಿದಾಟ, ತಿಳಿಹಾಸ್ಯ ಅದೆಲ್ಲಕ್ಕಿಂತ ಹೆಚ್ಚಾಗಿ ಸೂಪರ್ ಹಾಡುಗಳು ಇರುವ ಜೋಗಿ ಕಿರುತೆರೆಯಲ್ಲಿ ಪ್ರಪ್ರಥಬಾರಿ ಜೀ ಕನ್ನಡದಲ್ಲಿ ಮೂಡಿ ಬರಲಿದೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತನೀಡಿದ್ದು, ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿದ್ದಾರೆ.ಅಶ್ವಿನಿ ರಾಮ್ ಪ್ರಸಾದ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

(ದಟ್ಸ್ ಕನ್ನಡ ಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada