For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್‌ಗೆ ಜೊತೆಯಾದ ಕಮಲಿನಿ ಮುಖರ್ಜಿ

  By Rajendra
  |

  'ಸವಾರಿ' ಚಿತ್ರದ ಬಳಿಕ ಕಮಲದ ಕಣ್ಣಿನ ಕಮಲಿನಿ ಮುಖರ್ಜಿ ಗಾಂಧಿನಗರದಿಂದ ನಾಪತ್ತೆಯಾಗಿದ್ದರು. ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಶಂಕರೇಗೌಡ ನಿರ್ಮಿಸುತ್ತಿರುವ 'ವರದನಾಯಕ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

  ಈ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರವನ್ನು ಪೋಷಿಸುತ್ತಿದ್ದಾರೆ. ಸುದೀಪ್‌ಗೆ ಕಮಲಿನಿ ಜೊತೆಯಾಗಲಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಅಯ್ಯಪ್ಪ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ನಿಕೇಶಾ ಪಟೇಲ್ ಮುಖ್ಯಪಾತ್ರಧಾರಿಗಳು.

  ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ ವರದನಾಯಕ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ಸುದೀಪ್ ಅಣ್ಣನಾಗಿ ಕಾಣಿಸಲಿದ್ದಾರೆ. ಸುದೀಪ್ ಅವರದು ರಫ್ ಅಂಡ್ ಟಪ್ ಪೊಲೀಸ್ ಪಾತ್ರ. ಚಿತ್ರದ ಉಳಿದ ಭಾಗದ ಚಿತ್ರೀಕರಣ ಫೆ.27ರಿಂದ ಆರಂಭವಾಗಲಿದೆ. (ಏಜೆನ್ಸೀಸ್)

  English summary
  After long gap actress Kamalinee Mukherjee returns to Kannada. Earlier she acted in Kannada movie Savari. Now she playing opposite Sudeep in Varadanayaka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X