»   » ಮದುವೆ ಮನೆಯಲ್ಲಿ ಮಲ್ಲಿಗೆಗೆ ಕ್ಲೈಮ್ಯಾಕ್ಸ್

ಮದುವೆ ಮನೆಯಲ್ಲಿ ಮಲ್ಲಿಗೆಗೆ ಕ್ಲೈಮ್ಯಾಕ್ಸ್

Posted By:
Subscribe to Filmibeat Kannada

ಇದುವರೆಗೂ ಯಾವ ಚಿತ್ರದಲ್ಲೂ ಕಾಣದ ಕರ್ನಾಟಕದ ಸುಂದರ ಸ್ಥಳಗಳಲ್ಲಿ ಚಿತ್ರೀಕೃತವಾಗಿರುವ ಸೊಗಸಾದ ಶೀರ್ಷಿಕೆಯ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ'ಗೆ ನಗರದ ಚಂದ್ರೋದಯ ಕಲ್ಯಾಣ ಮಂಟಪದಲ್ಲಿ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಂಡಿದ್ದಾರೆ ನಿರ್ದೇಶಕ ಈ.ಚನ್ನಗಂಗಪ್ಪ.

ಶ್ರವಂತ್, ರಾಧಿಕಾಗಾಂಧಿ, ಜಗದೀಶ್, ಸಿ.ಆರ್.ಸಿಂಹ, ಶರತ್‌ಲೋಹಿತಾಶ್ವ, ವಿನಯಾಪ್ರಕಾಶ್ ಹಾಗೂ 600ಕ್ಕೂ ಹೆಚ್ಚು ಸಹ ಕಲಾವಿದರು ಅಭಿನಯಿಸಿದ್ದ ಈ ಅದ್ದೂರಿ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳುವುದರೊಂದಿಗೆ ಮಲ್ಲಿಗೆಯ ಚಿತ್ರೀಕರಣವನ್ನು ನಿರ್ದೇಶಕರು ಪೂರ್ಣಗೊಳ್ಳಿಸಿದ್ದಾರೆ . ಕೆಂಪಾಬಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಅಶ್ವತ್ ಹಾಗೂ ಡಿ.ರಾಮಚಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಈ.ಚನ್ನಗಂಗಪ್ಪ. ಪ್ರೇಮಕವಿ ಕೆ.ಕಲ್ಯಾಣ್ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ'ಗೆ ಮಧುರವಾದ ಗೀತೆಗಳನ್ನು ರಚಿಸಿರುವುದಲ್ಲದೆ ಸಂಗೀತವನ್ನು ಸಂಯೋಜಿಸಿದ್ದಾರೆ.

ಉಳಿದಂತೆ ಜೆ.ಜಿ.ಕೃಷ್ಣ ಛಾಯಾಗ್ರಹಣ, ರವಿ ಸಂಕಲನ, ಸುಂದರಂ ಕಲೆ, ಪ್ರಸಾದ್ ನೃತ್ಯ, ಪ್ರಕಾಶ್, ರುದ್ರೇಶ್ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರವಂತ್, ಜಗದೀಶ್, ಆನಂದ್, ರಾಧಿಕಾಗಾಂಧಿ, ಸಿ.ಆರ್.ಸಿಂಹ, ರಾಮಕೃಷ್ಣ, ಅವಿನಾಶ್, ವಿನಯಾಪ್ರಕಾಶ್, ಕರಿಬಸವಯ್ಯ, ಎ.ಎಸ್.ಮೂರ್ತಿ, ವಿಜಯಸಾರಥಿ ಮುಂತಾದವರಿದ್ದಾರೆ.


ಸಿಸಿ ಕ್ಯಾಮೆರಾ ಇರದ ಚಿತ್ರಮಂದಿರ ಬಂದ್

ಸಿನಿಮಾ ಮಂದಿರಗಳಲ್ಲಿ closed circuitಸಿಸಿ ಕೆಮರಾ ಮತ್ತು ಲೋಹ ಪರಿಶೋಧಕ ಯಂತ್ರ ಅಳವಡಿಕೆ ಕಡ್ಡಾಯಗೊಳಿಸಲು ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುವುದಾಗಿ ಪೊಲೀಸ್ ಆಯುಕ್ತ ಬಿಪಿನ್ ಗೋಪಾಲಕೃಷ್ಣ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ನ ರಾಬಾದ್ ಲುಂಬಿನಿ ಪಾರ್ಕ್ ನಲ್ಲಿ ಸ್ಫೋಟ ಸಂಭವಿಸಿದ ಬಳಿಕೆ ಎಲ್ಲಾ ಸಿನಿಮಾ ಮಂದಿರಗಳು ಹಾಗೂ ಮನರಂಜನಾ ಕೇಂದ್ರಗಳಿಗೆ ಲೋಹ ಪರಿಶೋಧಕ ಯಂತ್ರ ಅಳವಡಿಸಲು ಸೂಚಿಸಲಾಗಿತ್ತು. ಆದರೆ ಬಹುತೇಕ ಚಲನಚಿತ್ರಮಂದಿರದ ಮಾಲೀಕರು ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಎಚ್ಚರಿಕೆ ನೀಡಿ ಗುರುವಾರ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದ ಚಿತ್ರಮಂದಿರಗಳ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಗೋಪಾಲಕೃಷ್ಣ ಹೇಳಿದರು.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada