ಈ ವಾರ ತೆರೆಗೆ ಹೊಸಬರ ಮ್ಯಾಡ್ ಲವ್
ಜೆ.ಕೆ.ಎಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಮ್ಯಾಡ್ ಲವ್" ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕರಾದ ರಾಮು ಹಾಗೂ ಗಂಗಾಧರ್ ತಿಳಿಸಿದ್ದಾರೆ.
ಖ್ಯಾತ ಸಾಹಿತಿ ಡಾ.ದೊಡ್ಡರಂಗೇ ಗೌಡ ಅವರ ಶಿಷ್ಯ ತೇಜ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿಷ್ಯನ ಒತ್ತಾಯಕ್ಕೆ ಮಣಿದ ದೊಡ್ಡರಂಗೇ ಗೌಡರು ಚಿತ್ರದಲೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ತೇಜ ಬಹುಮುಖ ಪ್ರತಿಭೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿರುವ ಅವರು ಗೀತರಚನೆಯನ್ನೂ ಮಾಡಿದ್ದಾರೆ. ಹದಿಹರೆಯದವರ ಹುಚ್ಚುಪ್ರೀತಿಯೇ ಈ ಮ್ಯಾಡ್ ಲವ್ ಎಂಬ ಅಡಿಬರಹವನ್ನೂ ನೀಡಿದ್ದಾರೆ.
ರಾಮು ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನ ಪಾತ್ರವನ್ನೂ ನಿರ್ವಹಣೆ ಮಾಡಿದ್ದಾರೆ. ರವೀನಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಂಗಶ್ರೀ ರಂಗಸ್ವಾಮಿ, ಡಾ.ದೊಡ್ಡರಂಗೇ ಗೌಡ, ಪ್ರಮಿಳಾ ಜೋಷಾಯ್, ಪದ್ಮಾವಾಸಂತಿ, ಅಶೋಕ್ ರಾವ್, ಕಿಲ್ಲರ್ ವೆಂಕಟೇಶ್, ಸುಧೀಂದ್ರ, ಮಂಜು ಚಿತ್ರದ ತಾರಾಬಳಗದಲಿದ್ದಾರೆ. ಲಯನ್ ಗೂಚಿ ಅವರ ಸಂಗೀತವಿರವ 'ಮ್ಯಾಡ್ ಲವ್ ಗೆ ಆನಂದ್ ಅವರ ಛಾಯಾಗ್ರಹಣವಿದೆ. ಆರ್.ಡಿ.ರವಿ ಸಂಕಲನ, ದೇವ್ ಪರಿಕಲ್ಪನೆ, ಸಹ ನಿರ್ದೇಶನ, ಕಪಿಲ್ ನೃತ್ಯ, ವಿಕ್ರಂ ಸಾಹಸ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











