ರಮ್ಯಾ-ಯಶ್ ಭಾರಿ ಕಿತ್ತಾಟದ ಒಳಗುಟ್ಟು ಬಹಿರಂಗ
ಲಕ್ಕಿ ಪ್ರಚಾರದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ರಮ್ಯಾ ಮತ್ತು ಯಶ್ ಪರಸ್ಪರ ಕಿತ್ತಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಬಾಯಲ್ಲಿ ಬಯ್ದುಕೊಂಡಿದ್ದು ಕಡಿಮೆಯಾಯ್ತು ಎಂಬಂತೆ ಟ್ವಿಟ್ಟರನ್ನೂ ಕೂಡ ರಣರಂಗ ಮಾಡಿಕೊಂಡಿದ್ದಾರೆ. ಒಬ್ಬರ ಬಗ್ಗೆ ಮತ್ತೊಬ್ಬರು ಕಾಲೆಳೆಯುತ್ತಾ ವಾಹಿನಿಗಳಲ್ಲಿ ಸುತ್ತುಬಳಸಿ ಜಗಳವಾಡುತ್ತಿದ್ದಾರೆ.
ಯಶ್-ರಮ್ಯಾ ಹೀಗೇಕೆ ಆಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ... ಅದೂ ಕೂಡ ಲಕ್ಕಿ ಚಿತ್ರದ ಪ್ರಚಾರದ ವೈಖರಿ ಅಷ್ಟೇ. ಟ್ರೈಲರ್, ಪೋಸ್ಟರ್ ಹಾಗೂ ಟಿವಿ ವಾಹಿನಿಗಳಲ್ಲಿ ಆಗಾಗ ಪ್ರತ್ಯಕ್ಷವಾಗುತ್ತಿರುವ ಪ್ರೋಮೋಗಳೆಲ್ಲಾ ಲಕ್ಕಿ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಅಪಾರ ನಿರೀಕ್ಷೆ ಹುಟ್ಟಿಸಿವೆ. ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂಬ ನಂಬಿಕೆ ಚಿತ್ರತಂಡದ್ದು.
ರಮ್ಯಾ, ಯಶ್ ಪ್ರಮುಖ ತಾರಾಗಣದ 'ಲಕ್ಕಿ'ಯಲ್ಲಿ ಸೋನು ಸೂದ್, ಸಾಧು ಕೋಕಿಲಾ, ಶರಣ್, ಬಿರಾದಾರ್, ತಬಲನಾಣಿ ಮುಂತಾದವರೂ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕೃಷ್ಣ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ. ರವಿವರ್ಮ ಸಾಹಸ ಚಿತ್ರದಲ್ಲಿ ಮೈನವಿರೇಳಿಸುವಂತಿದೆ ಎಂದಿದೆ ಚಿತ್ರತಂಡ. ಇನ್ನೇನು ಸದ್ಯದಲ್ಲಿ ಲಕ್ಕಿ ನೋಡುವ ಲಕ್ ನಿಮ್ಮದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











