ನಟ ಮಹೇಶ್ ಬಾಬು ಸಂಭಾವನೆ ರು.15 ಕೋಟಿ

By Rajendra

ತೆಲುಗು ಚಿತ್ರರಂಗದ ಒಂದು ಕಾಲದ ಸೂಪರ್ ಸ್ಟಾರ್ ಕೃಷ್ಣ ಅವರ ಪುತ್ರ ಮಹೇಶ್ ಬಾಬು ಟಾಲಿವುಡ್‌ನಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಮಹೇಶ್ ಬಾಬು ರು.15 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಟಾಲಿವುಡ್ ಮೂಲಗಳು.

ಟಾಲಿವುಡ್‌ನಲ್ಲಿ ಇದುವರೆಗೂ ಯಾರೊಬ್ಬರೂ ಇಷ್ಟೊಂದು ಮೊತ್ತವನ್ನು ಪಡೆದಿಲ್ಲ ಎನ್ನಲಾಗಿದೆ. ತೆಲುಗಿನಲ್ಲಿ ಪ್ರಿನ್ಸ್ ಎಂದೇ ಕರೆಸಿಕೊಂಡಿರುವ ಮಹೇಶ್ ಬಾಬು ಅಭಿನಯದ 'ಬಿಜಿನೆಸ್ ಮ್ಯಾನ್' ಹಾಗೂ 'ದೂಕುಡು' ಚಿತ್ರಗಳು ಬಾಕ್ಸಾಫೀಸರಲ್ಲಿ ಹೊರ ದಾಖಲೆ ನಿರ್ಮಿಸಿದ್ದವು.

ಮಹೇಶ್ ಅಭಿನಯದ ತೆಲುಗು ಬ್ಲಾಕ್‌ಬಸ್ಟರ್ ಚಿತ್ರ 'ಪೋಕಿರಿ' ಕನ್ನಡಕ್ಕೆ 'ಪೊರ್ಕಿ'ಯಾಗಿ (ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ) ರೀಮೇಕ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆಯಾಗಿ ಚಿರಂಜೀವಿ ಪುತ್ರ ರಾಮ್ ಚರಣ್, ಸೋದರಳಿಯ ಅಲ್ಲು ಅರ್ಜುನ್ ಹಾಗೂ ಜೂ.ಎನ್ಟಿಆರ್ ಅವರನ್ನೆಲ್ಲಾ ಸಂಭಾವನೆಯಲ್ಲಿ ವಿಷಯದಲ್ಲಿ ಮಹೇಶ್ ಹಿಂದಿಕ್ಕಿ ಮುನ್ನುಗ್ಗಿರುವುದು ವಿಶೇಷ. (ಏಜೆನ್ಸೀಸ್)

More from Filmibeat

English summary
As per the latest reports Tollywood hero Mahesh Babu is soon going to act in a new film, he has been paid a record amount of about Rs 15 Crores for this film, which is the highest remuneration for Tollywood heroes so far.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X