twitter
    For Quick Alerts
    ALLOW NOTIFICATIONS  
    For Daily Alerts

    ಮಂಗಳೂರಿನಲ್ಲಿ ಅಪ್ರಾಪ್ತರಿಗೆ ಅಶ್ಲೀಲ ಚಿತ್ರ ವೀಕ್ಷಣೆಗೆ ಮುಕ್ತ ಮುಕ್ತ

    By * ಶ್ರೀಧರ ಕೆದಿಲಾಯ, ಉಡುಪಿ
    |

    Minors allowed to watch X rated movies in Mangalore
    ಅಶ್ಲೀಲ ಚಿತ್ರಗಳಿಗೆ ಅಪ್ರಾಪ್ತರಿಗೆ ಪ್ರವೇಶ ನಿಷಿದ್ಧವಾಗಿದ್ದರೂ ನಗರದ ಮಲ್ಟಿಫ್ಲೆಕ್ಸ್ ಚಿತ್ರ ಮಂದಿರಗಳು ಕಾನೂನನ್ನು ಗಾಳಿಗೆ ತೂರಿ ಅಪ್ರಾಪ್ತರಿಗೂ ಚಿತ್ರ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

    ಒಂದು ವೇಳೆ ಚಿತ್ರದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಕುಟುಂಬ ಸಮೇತರಾಗಿ ಹೋದರೆ ಮುಜುಗರ ಪಡಬೇಕಾಗುತ್ತದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

    ಸಿನಿಮಾ ಎಂಬುದು ಇತ್ತೀಚಿನ ದಿನಗಳಲ್ಲಿ ತನ್ನ ಎಲ್ಲೆ ಮೀರುತ್ತಿದೆ. ಕುಟುಂಬ ಸಮೇತರಾಗಿ ಯಾವುದಾದರೊಂದು ಸಿನಿಮಾ ನೋಡಲು ಹೋದರೆ ಹತ್ತೇ ನಿಮಿಷದಲ್ಲಿ ಚಿತ್ರಮಂದಿರದಿಂದ ಹೊರನಡೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾರಣ ಚಿತ್ರದಲ್ಲಿರುವ ಮಿತಿಮೀರಿದ ಅಶ್ಲೀಲತೆ. ನಗರದಲ್ಲಿ ಹಲವಾರು ಥಿಯೇ ಟರ್‌ಗಳಿವೆ. ಅದರಲ್ಲಿ ಹೈಕ್ಲಾಸ್ ಜನರಿಗೆಂದೇ ನಗರದ ಬಜೈ ಬಳಿಯ ಶಾಪಿಂಗ್ ಮಾಲ್ ಒಂದರಲ್ಲಿ ಮಲ್ಟಿಫ್ಲೆಕ್ಸ್ ಸಿನಿಮಾ ಮಂದಿರವೊಂದಿದೆ.

    ಕುಟುಂಬ ಸಮೇತರಾಗಿ ಚಿತ್ರ ವೀಕ್ಷಿಸಲು ಬಂದವರು ಮಾತ್ರ ಈಗ ಚಿತ್ರ ಮಂದಿರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಲೆಂದೇ ನಗರದಲ್ಲಿ ಕೆಲವೊಂದು ಚಿತ್ರಮಂ ದಿರಗಳಿವೆ. ಆದರೆ ಇಲ್ಲಿ ವಿಪರೀತ ಅಶ್ಲೀಲತೆಯಿಂದ ಕೂಡಿದ ಹಿಂದಿ ಚಿತ್ರವೊಂದು ತೆರೆಕಂಡಿದೆ.

    ಚಿತ್ರ ನೋಡುವ ಪ್ರೇಕ್ಷಕ ಹೆಚ್ಚಾಗಿ ಅದಕ್ಕೆ ನೀಡಿರುವ ಪ್ರಮಾಣ ಪತ್ರಗಳನ್ನು ಗಮನಿಸುವುದಿಲ್ಲ. ಹಾಗಾಗಿ ಮನೋರಂಜನೆಯ ದೃಷ್ಟಿಯಿಂದ ಚಿತ್ರ ವೀಕ್ಷಿಸಲು ಕುಟುಂಬ ಸಮೇತರಾಗಿ ಹೋಗುತ್ತಾರೆ. ಇದೇ ರೀತಿ ಚಿತ್ರ ವೀಕ್ಷಿಸಲು ಹೋದ ಕುಟುಂಬವೊಂದು ಪತ್ರಿಕೆಯ ಬಳಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

    'ನಮಗೆ ಅಲ್ಲಿ ಪ್ರದರ್ಶನವಾಗುತ್ತಿದ್ದದ್ದು ಹಿಂದಿ ಚಿತ್ರವೆಂದು ಗೊತ್ತಿತ್ತು, ಆದರೆ ಅದರಲ್ಲಿ ಅತಿಯಾದ ಅಶ್ಲೀಲತೆ ಇತ್ತೆಂದು ಖಂಡಿತಾ ಗೊತ್ತಿರಲಿಲ್ಲ. ಹಾಗಾಗಿ ನಾವು ನಮ್ಮ ಇಬ್ಬರು ಸಣ್ಣ ವಯಸ್ಸಿನ ಮಕ್ಕಳೊಂದಿಗೆ ಸಿನಿಮಾ ನೋಡಲು ಹೋದೆವು.

    ಒಂದು ವೇಳೆ ಅದು ವಯಸ್ಕರ ಚಿತ್ರವೇ ಆಗಿದ್ದರೆ, ಮಕ್ಕಳೊಂದಿಗೆ ಹೋಗುವಾಗ ಚಿತ್ರಮಂದಿರದ ಸಿಬ್ಬಂದಿ ತಡೆಯಬೇಕಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಗೊತ್ತಿಲ್ಲದೆ ಹೋದ ತಪ್ಪಿಗೆ ನಾವೇ ಮುಜುಗರದಿಂದ ಹತ್ತೇ ನಿಮಿಷದಲ್ಲಿ ಹೊರ ಬಂದೆವು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಇಲ್ಲಿ ಡೆಲ್ಲಿ ಬೆಲ್ಲಿ ಎಂಬ ಹಿಂದಿ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಮಾತ್ರ ಕುಟುಂಬ ಸಮೇತರಾಗಿ ನೋಡುವ ಚಿತ್ರವಲ್ಲ.

    ಸೆನ್ಸಾರ್ ಬೋರ್ಡ್ ಕೂಡ ಈ ಚಿತ್ರಕ್ಕೆ ಎ(ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ನೀಡಿದೆ. ಈ ರೀತಿಯ ಚಿತ್ರಗಳ ಬಗ್ಗೆ ಇರುವ ಕಟ್ಟುನಿಟ್ಟಿನ ನಿಯಮಾವಳಿಯನ್ನಾದರೂ ಚಿತ್ರಮಂದಿರಗಳು ಸರಿಯಾಗಿ ಪಾಲಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

    ಈ ರೀತಿಯ ಚಿತ್ರಗಳಿಗೆ ಸಣ್ಣ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲದಿದ್ದರೂ ಇಲ್ಲಿನ ಸಿಬ್ಬಂದಿ ಈ ಬಗ್ಗೆ ಗಮನ ಹರಿಸುವುದೇ ಇಲ್ಲ ಎಂಬ ಆರೋಪ ಜನರಿಂದ ಕೇಳಿಬಂದಿದೆ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಚಿತ್ರ ಮಂದಿರದ ಮಾಲಕ ರನ್ನು ಎಚ್ಚರಿಸುವ ಕೆಲಸ ಮಾಡಲಿ ಎಂಬುದು ಚಿತ್ರಪ್ರೇಮಿಗಳ ಆಗ್ರಹ.

    English summary
    Minors(Below 18) are easily allowed to watch x rated restricted movies in Mangalore Multiplex. Hindi movies are screened in shopping mall near Bajai is not acceptable to family audience. Censor board and Mangalore city corporation has to act on this immediately.
    Monday, August 8, 2011, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X