»   » ಹಾಡುಗಳ ಚಿತ್ರೀಕರಣದಲ್ಲಿ 'ಈ ಸಂಭಾಷಣೆ'

ಹಾಡುಗಳ ಚಿತ್ರೀಕರಣದಲ್ಲಿ 'ಈ ಸಂಭಾಷಣೆ'

Subscribe to Filmibeat Kannada

ಪ್ರೀತಿಗೆ ಪ್ರಪಂಚದಲ್ಲಿ ಅವರವರದೇ ವ್ಯಾಖ್ಯಾನ. ಓಂಸಾಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಂಭಾಷಣೆ ಚಿತ್ರದಲ್ಲಿ ಪ್ರೀತಿಯನ್ನು ದೇವರಿಗೆ ಹೋಲಿಸಿ ಪ್ರೀತಿಯ ತೊಂದರೆ ಬಗ್ಗೆ ಪ್ರಶ್ನಿಸಿದ್ದಾರೆ ಸಾಹಿತಿ ಕವಿರಾಜ್. ಚಿತ್ರಕ್ಕೆ ಅವರು ಬರೆದಿರುವ ''ಜುಂಕಲಕಡಿ ಜುಮ್ಮ ಪ್ರೀತಿ ಅಂದ್ರೆ ದೇವ್ರು ಅಂತ ಹೇಳ್ತಾರೆ ಎಲ್ಲರೂ.. ಆದ್ರೂ ಯಾಕೊ ದೇವ್ರೆ ಪ್ರೀತಿಗಿಷ್ಟು ತೊಂದ್ರೆ - ಪ್ರೀತಿ ಮಾಡೋಣ ಅಂದ್ರೆ ಎಂಥ ಕಷ್ಟ'' ಎಂಬ ಗೀತೆ ನಂದಿಗ್ರಾಮದಲ್ಲಿ ಚಿತ್ರೀಕೃತವಾಯಿತು. ಸುಂದರ ಸಂದೇಶ, ಬೆಡಗಿ ಹರಿಪ್ರಿಯಾ ಹಾಗೂ ಸಹನರ್ತಕರು ಅಭಿನಯಿಸಿದ ಈ ಗೀತೆಗೆ ಮದನ್-ಹರಿಣಿ ನೃತ್ಯ ಸಂಯೋಜಿಸಿದ್ದಾರೆ.

ಮೇಜರ್ ಶ್ರೀನಿವಾಸ ಪೂಜಾರ್ ಹಾಗೂ ಜ್ಯೋತಿಬಸವರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಜಶೇಖರ್ ಅವರು ಪ್ರಥಮ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್, ಹರ್ಷ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ಶಿವಮೂರ್ತಿ ಸಹನಿರ್ದೇಶನ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada