ನಂಬ್ರಿ! ಜೋಗಯ್ಯ ಮೊದಲ ದಿನ ಗಳಿಕೆ 3.75 ಕೋಟಿ ರು

By Mahesh

ನಿರೀಕ್ಷೆಯಂತೆ ಜೋಗಯ್ಯ ಭರ್ಜರಿ ಓಪನಿಂಗ್ ಪಡೆದಿದೆ. ಮಂದಿನ ದಿನಗಳಲ್ಲಿ ಜೋಗಯ್ಯನ ಜೋಳಿಗೆ ತುಂಬ ಬೇಕಾದರೆ ಅದು ಶಿವಣ್ಣ ಹಾಗೂ ಹರಿಕೃಷ್ಣ ಸಂಗೀತದಿಂದ ಮಾತ್ರ ಎಂಬುದು ಅಭಿಮಾನಿಗಳ ಮಾತು. ಏನೇ ಇರಲಿ ಮೊದಲೇ ದಿನವೇ ಕೋಟಿಗಟ್ಟಲೆ ಬಾಚಿದ ಕನ್ನಡ ಚಿತ್ರಗಳ ಸಂಖ್ಯೆ ಎಷ್ಟಿದೆ ಹೇಳಿ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ ಮೊದಲ ದಿನದ ಗಳಿಕೆ ದಾಖಲೆ ಬರೆದಿದೆ. ಸುಮಾರು 220 ಚಿತ್ರಗಳಿಂದ 3.75 ಕೋಟಿ ರು ಲಾಭ ಬಂದಿದೆ ಎಂದು ನಿರ್ದೇಶಕ ಪ್ರೇಮ್ ಹೇಳುತ್ತಾರೆ. ನಿರ್ಮಾಪಕಿ ರಕ್ಷಿತಾ ಪರ ಮಾತನಾಡಿದ ಪ್ರೇಮ್, ಒಟ್ಟು ಗಳಿಕೆಯಲ್ಲಿ ಥೇಟರ್ ಬಾಡಿಗೆ ದರ ಕೂಡಾ ಸೇರಿದೆ. ಮೊದಲ ದಿನದ ಒಟ್ಟು ಗಳಿಕೆ 3.75 ಕೋಟಿ ರು ಆಗಿದೆ ಎಂದಿದ್ದಾರೆ.

ಬೆಂಗಳೂರಿನ ಸುಮಾರು 70 ಚಿತ್ರಮಂದಿರಗಳಿಂದ ಸುಮಾರು 1.54 ಕೋಟಿ ರು ಸಿಕ್ಕಿದೆ. ಮೊದಲ ಹೋಂ ಪ್ರೊಡಕ್ಷನ್ ಲಾಭ ತಂದಿದೆ ಎಂದು ಪ್ರೇಮ್ ಲೆಕ್ಕ ಹೇಳುತ್ತಾರೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗಾಂಧಿನಗರದ ಬಾಕ್ಸಾಫೀಸ್ ಬಾಯ್ಬಿಟ್ಟು ಹೇಳ್ಬೇಕು.

3ಡಿ ಗಿಮಿಕ್ : 3ಡಿ ತಂತ್ರಜ್ಞಾನ ಸಮಸ್ಯೆ ಬಗ್ಗೆ ಅನೇಕ ಕಡೆಯಿಂದ ದೂರ ಬಂದಿದೆ. ಪಿವಿಆರ್, ಇನೋಕ್ಸ್ ಇತರೆ ಮಲ್ಟಿಪ್ಲೆಕ್ಸ್ ನಲ್ಲಿ ಈಗ 3ಡಿ ಲಭ್ಯವಿದೆ. ಸೋಮವಾರದಿಂದ ಮಾಮೂಲಿ ಚಿತ್ರಮಂದಿರಗಳಲ್ಲೂ 3ಡಿ ಅನುಭವ ಪಡೆಯಬಹುದು ಎಂದರು.

ದೇವರಾಣೆ ಇದು ಗಿಮಿಕ್ ಅಲ್ಲ. ಸುಮಾರು 1.75 ಕೋಟಿ ಸುರಿದು ಒಂದು ಹಾಡು ಹಾಗೂ ಒಂದು ಫೈಟ್ ಸೀನ್ ಅನ್ನು 3 ಡಿ ತಂತ್ರಜ್ಞಾನದಲ್ಲಿ ಮೂಡಿಸಿದ್ದೇವೆ. ಸೆನ್ಸಾರ್ ಬೋರ್ಡ್ ಕೂಡಾ 3 ಡಿ ಬಳಕೆ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದೆ.

ಮೊದಲ ದಿನದ ಹುಚ್ಚು ಅಭಿಮಾನಿಗಳು ದುಬಾರಿ ಬೆಲೆಯ 3ಡಿ ಕನ್ನಡಕ ಹಾಳು ಮಾಡುತ್ತಾರೆ ಅದಕ್ಕೆ ಮೊದಲ ದಿನ 3ಡಿ ಎಲ್ಲೂ ಸಿಗುವಂತೆ ಮಾಡಲಿಲ್ಲ ಎಂಬ ದೂರನ್ನು ಪ್ರೇಮ್ ಅಲ್ಲಗೆಳೆದರು. ಜೋಗಯ್ಯ ಗಳಿಕೆ ಹೀಗೆ ಮುಂದುವರೆಯುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

More from Filmibeat

English summary
Movie Jogayya has got best opening and first day collection total is around Rs. 3.75 Cr said Director Prem. Shivaraj's 100th movie has brought Rs 1.54 cr alone in Bangalore area. Producer Rakshitha prem has hope that Jogayya will rule Box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X