ನಂ ಏರಿಯಾದಲ್ಲಿ ಒಂದಿನ ಏನ್ ಫಿಲಂ ಗುರು
ಪ್ರೇಕ್ಷಕರು ಕಾತುರ, ಕುತೂಹಲದಿಂದ ನಿರೀಕ್ಷಿಸಿರುವಂತೆ ಮಾಡಿರುವ ಚಿತ್ರ "ನಂ ಏರಿಯಾದಲ್ಲಿ ಒಂದಿನ". ಈ ಚಿತ್ರದ ಡೈಲಾಗ್ ಗಳು ಹಾಡುಗಳಷ್ಟೆ ಜನಪ್ರಿಯವಾಗಿವೆ. ಸ್ಯಾಂಪಲ್ ಗೆ ಇಲ್ಲಿಗೆ ಓದಿ ಒಂದು ಡೈಲಾಗ್. ಬೇಕಾಬಿಟ್ಟಿ ಜೀವನ..ಬದ್ಕು ಚಿಂದಿ ಚಿತ್ರಾನ್ನ,,,ನಕ್ರಾ ಹೊಡೆದ್ರೆ ಗುನ್ನಾ.... ಒಟ್ನಲ್ಲಿ ವಿಚಿತ್ರವಾಗಿರ್ತಾರೆ ಜನ... ...
ಈ ಚಿತ್ರ ಜುಲೈ 23ರಂದು ರಾಜ್ಯದಾದ್ಯಂತೆ ತೆರೆಕಾಣುತ್ತಿದೆ. ತಮ್ಮ ಚಿತ್ರದಲ್ಲಿ ಎಲ್ಲವೂ ವಿಶಿಷ್ಟವಾಗಿರಬೇಕು ಎಂದು ಬಯಸುವ ಅರವಿಂದ್, ಚಿತ್ರದ ಟೈಟಲ್, ಪಾತ್ರಧಾರಿಗಳ ಹೆಸರನ್ನು ಕೂಡ ವಿಚಿತ್ರವಾಗಿ ಆರಿಸಿದ್ದಾರೆ. ಸೈಲೇನ್ಸರ್ ಸೀನ, ಲೈಟ್ ಕಂಬ, ಕರಡಿ ಕುಮಾರ, ತಿಕ್ಲ, ಪುಕ್ಲಾ...ಇತ್ಯಾದಿ. ಆದರೆ ಈ ರೀತಿ ಹೆಸರು ನಮ್ ಏರಿಯಾದಲ್ಲಿ(ಎಲ್ಲಾ ಏರಿಯಾದಲ್ಲೂ) ಕಾಮನ್ ಎನ್ನುತ್ತಾರೆ ನಿರ್ದೇಶಕರು.
ಇದೊಂದು ವಿಚಿತ್ರ, ವಿಶಿಷ್ಟ ಶೀರ್ಷಿಕೆಯುಳ್ಳ ಸ್ವಮೇಕ್ ಚಿತ್ರ.ಹೊಸಬರೊಂದಿಗೆ ಹೊಸ ಬಗೆಯ ಚಿತ್ರ ತಯಾರಿಸಿದ್ದಾರೆ ನಟ, ನಿರ್ದೇಶಕ ಅರವಿಂದ್ ಕೌಶಿಕ್. ಈ ಚಿತ್ರ ಮತ್ತೊಂದು ದುನಿಯಾ ಅಥವಾ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಯುವ ವಲಯದಿಂದ ಕೇಳಿಬಂದಿದೆ. ಚಿತ್ರದ ಟ್ರೈಲರ್.


Click it and Unblock the Notifications











