For Quick Alerts
  ALLOW NOTIFICATIONS  
  For Daily Alerts

  ರ್‍ಯಾಸ್ಕಲ್‌ಗೆ ಸಿಕ್ಕಿದಳು ಕ್ಯಾಡ್ಬರಿ ಸುಂದರಿ ಪಲ್ಲವಿ ಸುಭಾಷ್

  By Rajendra
  |

  ಗಾಂಧಿನಗರಕ್ಕೆ ಮುಂಬೈ ಹೊಸ ರೂಪದರ್ಶಿಯೊಬ್ಬಳ ಎಂಟ್ರಿಯಾಗಿದೆ. ಈಕೆಯ ಹೆಸರು ಪಲ್ಲವಿ ಸುಭಾಷ್ ಶಿರ್ಕೆ. ಈಕೆ ಅಭಿನಯಿಸುತ್ತಿರುವುದು 'ರ್‍ಯಾಸ್ಕಲ್' ಜೊತೆ! ಆದಿತ್ಯ ಮುಖ್ಯಭೂಮಿಕೆಯಲ್ಲಿರುವ 'ರ್‍ಯಾಸ್ಕಲ್' ಚಿತ್ರಕ್ಕೆ ನಾಯಕಿಯಾಗಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಜೈ ಜಗದೀಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಕೆ ಮಾದೇಶ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಈಕೆ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೋಲೇಟ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲೇ ಚಾಕೋಲೇಟ್‌ನಂತಹ ಕೆನ್ನೆ, ಇನ್ನು ಕೈಯಲ್ಲಿ ಡೈರಿ ಮಿಲ್ಕ್ ಇದ್ದರೆ ಪಡ್ಡೆಗಳ ಕತೆ ಮುಗಿದೇ ಹೋಯಿತು.

  ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ ತಮಿಳು ಚಿತ್ರ 'ಓಂ'ನಲ್ಲೂ ಪಲ್ಲವಿ ಅಭಿನಯಿಸಿದ್ದಾರೆ. ರ್‍ಯಾಸ್ಕಲ್ ಚಿತ್ರಕ್ಕೆ ರಾಧಿಕಾ ಪಂಡಿತ್‌ರನ್ನು ನಾಯಕಿಯಾಗಿ ಕರೆತರಲು ಮೊದಲು ಚಿಂತಿಸಲಾಗಿತ್ತು, ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಪಲ್ಲವಿಯನ್ನು ಆಯ್ಕೆ ಮಾಡಲಾಗಿದೆ. (ಏಜೆನ್ಸೀಸ್)

  English summary
  Actress Pallavi Subhash Shirke has been selected as a heroine of Aditya lead Kannada movie Rascal. The movie is being produced by Jai Jagadish and directed by K. Maades. The Chubby Cheek actress appeared in Cadbury Dairy Milk ad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X