»   » ಪಾನ್‌ವಾಲಾ ಗೆಟಪ್ಪಿನಲ್ಲಿ ಶಿವರಾಜ್ ಕುಮಾರ್!

ಪಾನ್‌ವಾಲಾ ಗೆಟಪ್ಪಿನಲ್ಲಿ ಶಿವರಾಜ್ ಕುಮಾರ್!

Subscribe to Filmibeat Kannada

ಏ.21 ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೊಸ ಚಿತ್ರ ಸೆಟ್ಟೇರಿತು. ಚಿತ್ರದ ಹೆಸರು 'ಪರಮೇಶ ಪಾನ್‌ವಾಲ'. ಪರಮೇಶ ಎನ್ನುವುದು ಚಿತ್ರದ ಟೈಟಲ್ಲು. ಪಾನ್‌ವಾಲ ಎಂಬುದು ಚಿತ್ರದ ಅಡಿ ಬರಹ. ಥೇಟು 'ಡಾನ್' ಚಿತ್ರದಲ್ಲಿನ ಶಾರುಖ್‌ ಖಾನ್ ಗೆಟಪ್ಪಿನಲ್ಲಿ ಶಿವರಾಜ್‌ ಕುಮಾರ್ ದರ್ಶನ ಕೊಡಲಿದ್ದಾರೆ. ಇದಕ್ಕಾಗಿ ಶಾರುಖ್ ದೇಹದ, ಶಿವರಾಜ್ ಮುಖದ ವಿನ್ಯಾಸವನ್ನು ಆಮಂತ್ರಣ ಪತ್ರದಲ್ಲಿ ವಿನ್ಯಾಸಗೊಳಿಸಿದ್ದರು ಮಣಿ. ಶಾರುಖ್‌ರ 'ಡಾನ್' ಚಿತ್ರದ ಅದೇ ಡ್ರೆಸ್ಸು, ಅದೇ ಕಡಗ, ಅದೇ ಭಂಗಿ, ಅದೇ ಅಂಗಿ... ಆದರೆ ಮುಖ ಮಾತ್ರ ಶಿವರಾಜ್‌ರದ್ದು. ಇದೆಲ್ಲಾ ಪ್ರಚಾರಕ್ಕಾಗಿ ಮಣಿ ಮಾಡಿದ ಟ್ರಿಕ್ಕು ಅಷ್ಟೇ.

ಡಾನ್ ಚಿತ್ರದಲ್ಲಿ ಪಾನ್ ಜಗಿಯುತ್ತಾ ಗಲ್ಲಿ ಗಲ್ಲಿ ಸುತ್ತುತ್ತಿರುತ್ತಾನೆ ಶಾರುಖ್. ಶಿವರಾಜ್ ಕುಮಾರ್ ಅವರದೂ ಇದೇ ರೀತಿಯ ಪಾನ್‌‍ವಾಲಾ ಪಾತ್ರನಾ ಎಂಬುದನ್ನು ಕಾದು ನೋಡಬೇಕಾಗಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ 'ಡಾನ್' ಹೆಸರಿನ ಚಿತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು.

'ಅಂತು ಇಂತು ಪ್ರೀತಿ ಬಂತು' ಚಿತ್ರದ ನಿರ್ಮಾಣದ ನಂತರ ಆಂಧ್ರದ ಆದಿತ್ಯ ಬಾಬು ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅರಸು ಮತ್ತು ಆಕಾಶ್ ಚಿತ್ರಗಳ ಹಿಟ್ ನಿರ್ದೇಶಕ ಮಹೇಶ್ ಬಾಬು 'ಪರಮೇಶ ಪಾನ್‌ವಾಲ' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರದ ಮೊದಲ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...