ರೂಪದರ್ಶಿ ಪೂನಂ ಪಾಂಡೆ ಸ್ತನಕ್ಕೆ ಭರ್ಜರಿ ಸರ್ಜರಿ!
ರೂಪದರ್ಶಿ ಪೂನಂ ಪಾಂಡೆ ಹುಚ್ಚಾಟಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಮೊನ್ನೆ ಬಾತ್ ರೂಂ ದೃಶ್ಯಗಳನ್ನು ನೇರಪ್ರಸಾರ ಮಾಡಿದ್ದ ಈಕ್ಕೆ ಬಳಿಕ ಬೆಡ್ ರೂಂ ದೃಶ್ಯಗಳನ್ನು ಜಗತ್ತಿಗೆ ತೆರೆದಿಟ್ಟಿದ್ದಳು. ಬಹುಶಃ ಈಕೆಗೆ ಯಾವುದೋ ವೈದ್ಯರಿಗೆ ಗೊತ್ತಿಲ್ಲದಂತಹ ಮನೋರೋಗವಿರಬಹುದೇ ಎಂಬ ಅನುಮಾನ ಬರುವಂತೆ ನಡೆದುಕೊಳ್ಳುತ್ತಿದ್ದಾರೆ.
ಬಾರು ಕೋಲುನಂತಿರುವ ಈಕೆಯ ದೇಹದ ಪ್ರಮುಖ ಅಂಗವಾದ ಸ್ತನಗಳನ್ನು ಸರ್ಜರಿ ಮೂಲಕ ಭರ್ಜರಿಯಾಗಿ ಹಿಗ್ಗಿಸಿಕೊಂಡಿದ್ದಾರೆ. ಇದಕ್ಕಾಗಿ ಸಿಲಿಕಾನ್ ಕಸಿ ಮಾಡಿಸಿಕೊಂಡಿದ್ದಾಳೆ. ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 5'ಕ್ಕೆ ಎಂಟ್ರಿ ಕೊಡಲು ಈ ರೀತಿಯ ಸಾಹಸಕ್ಕೆ ಪೂನಂ ಎದೆ ನೀಡಿರುವುದು ವಿಶೇಷ.
ಆದರೆ ಪೂನಂ ಪಾಂಡೆ ಮಾತ್ರ ತಮ್ಮ ಸ್ತನಗಳು ಒರಿಜಿನಲ್ ಎಂದಿದ್ದಾರೆ. ತಾವು ಯಾವುದೇ ಸರ್ಜರಿ, ಕಸಿ ಎಂಥದೂ ಮಾಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈಕೆಯ ಬಾತ್ ರೂಂ ದೃಶ್ಯಗಳೊಂದಿಗೆ ತಾಳೆನೋಡಿದರೆ ಎದೆಯ ಉದ್ದಗಲ ಹೆಚ್ಚಾಗಿರುವುದು ಅಂಶ ಎದ್ದುಕಾಣುತ್ತದೆ.
ಪೂನಂ ಪಾಂಡೆ ಎದೆ ಅಷ್ಟೇ ಅಲ್ಲ ಆಕೆಯ ಪೃಷ್ಠಗಳನ್ನು ರಿಪೇರಿ ಮಾಡಿಸಿಕೊಂಡಿದ್ದಾಳೆ ಎಂದು ಸ್ವತಃ ಈಕೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೊಬ್ಬರು ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ 5 ಮನೆಗೆ ಬರುತ್ತಿರುವ ಮತ್ತೊಬ್ಬ ಸ್ಪರ್ಧಿ ಶ್ರದ್ಧಾ ಶರ್ಮ ಕೂಡ ತಮ್ಮ ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಂಡು ಬಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











