ಗಂಗಾನಗರದಲ್ಲಿ ಅಣ್ಣಾಬಾಂಡ್ ಪುನೀತ್ ಹುಟ್ಟುಹಬ್ಬ

ಹುಟ್ಟುಹಬ್ಬದ ದಿನ 'ಅಣ್ಣಾಬಾಂಡ್' ಚಿತ್ರೀಕರಣದಲ್ಲಿದ್ದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿನ್ನೆ (ಮಾರ್ಚ್ 20, 2012), ಎರಡು ದಿನ ತಡವಾಗಿ ತಮ್ಮ ಮನೆಯಲ್ಲಿ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಣ್ಣಾ ಬಾಂಡ್ ಶೂಟಿಂಗ್ ನಿಂದ ತಡವಾಗಿ ಬಂದ ಪುನೀತ್ ಅವರಿಗೆ ತಮ್ಮ ಮನೆಯಲ್ಲಿ ಅದಾಗಲೇ ನೆರೆದ ಜನಸ್ತೋಮ ಕಂಡು ಹೃದಯ ತುಂಬಿ ಬಂದಿದೆ.

ಕಾರಣ, ಪುನೀತ್ ಅವರಿಗೆ ಬರ್ತ್ ಡೇ ವಿಶ್ ಮಾಡಲು ಅಭಿಮಾನಿಗಳು ಬೆಳಿಗ್ಗೆಯಿಂದಲೇ ಗಂಗಾನಗರದ ಅವರ ಮನೆಯ ಮುಂದೆ ಕಾಯುತ್ತಿದ್ದರು. ಲೇಟಾಗಿ ಬಂದ ಪುನೀತ್, ತಕ್ಷಣ ಅಭಿಮಾನಿಗಳು ಹಾಗೂ ಕುಟುಂಬವನ್ನು ಸೇರಿಕೊಂಡು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪುನೀತ್ ಜೊತೆ ಅವರಣ್ಣ ರಾಘವೇಂದ್ರ ರಾಜ್ ಕುಮಾರ್ ಇದ್ದರು.

ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಬೇಡಬೇಡವೆಂದರೂ ಬಿಡದೇ ತಮ್ಮ ಮೆಚ್ಚಿನ ನಟನಿಗೆ ಕೇಕ್ ತಿನ್ನಿಸಿ ಹರ್ಷಗೊಂಡರು. ಪುನೀತ್ ಕೂಡ ವಿನಯ ಹಾಗೂ ಸಂತೋಷದಿಂದ ಅಭಿಮಾನಿಗಳ ಜೊತೆ ಬೆರೆತು ಸಂತಸ ಹಂಚಿಕೊಂಡರು. ಪುನೀತ್ ಗೆ ಜೈ.., ಅಣ್ಣಾಬಾಂಡ್ ಗೆ ಜೈ...ಎನ್ನುವ ಘೋಷಣೆ ಪುನೀತ್ ಮನೆಯ ಮುಂದೆ ಮುಗಿಲು ಮುಟ್ಟಿತ್ತು. (ಒನ್ ಇಂಡಿಯಾ ಕನ್ನಡ)

More from Filmibeat

English summary
Power Star Puneeth Rajkumar celebrated his Birthday in his Ganganagar house yesterday, on 20th March 2012 with his family and Fans. Actually his Birthday was on 17th March 2012. Because of movie Annabond shooting he celebrated it 2 days Later. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X