ನಟ ಪ್ರಕಾಶ್ ರೈ ಚೊಚ್ಚಲ ಕನಸು ನನಸು

By Rajendra

ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರ 'ನಾನು ನನ್ನ ಕನಸು' ನಿರ್ಮಾಣ ನಂತರದ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರವನ್ನು ಡ್ಯುಯೆಟ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ರೈ ಹಾಗೂ ಮೀಡಿಯಾ ಹೌಸ್ ಸ್ಟುಡಿಯೋದ ಬಿ ಸುರೇಶ್ ಮತ್ತು ಶೈಲಜಾ ನಾಗ್ ಜಂಟಿಯಾಗಿ ನಿರ್ಮಿಸಿದ್ದಾರೆ.

ಕೊಡಗು ಜಿಲ್ಲೆಯ ಬಾಗಮಂಡಲ, ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ, ತೆಲುಗೂರಿನ ಚಹಾ ತೋಟಗಳು, ಸಕಲೇಶಪುರ, ಶನಿವಾರಸಂತೆ ಹಾಗೂ ಮಡಿಕೇರಿ ಸುತ್ತಮುತ್ತ 'ನಾನು ನನ್ನ ಕನಸ'ನ್ನು ಚಿತ್ರೀಕರಿಸಲಾಗಿದೆ. ಶೀಘ್ರದಲ್ಲೇ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದು ತಾಜಾ ಟ್ಯೂನ್ ಗಳನ್ನು ಸಂಯೋಜಿಸಿದ್ದಾರೆ.

ಚಿಗರೆ ಕಂಗಳ ನಟಿ ಅಮೂಲ್ಯಗೆ ತಂದೆಯಾಗಿ ಪ್ರಕಾಶ್ ರೈ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಅನಂತ್ ಅರಸ್ ಅವರ ಛಾಯಾಗ್ರಹಣ, ಜಾನಿ ಹರ್ಷ ಅವರ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ಅಚ್ಯುತಕುಮಾರ್, ಸಿತಾರಾ, ವೀಣಾಸುಂದರ್, ರಾಜೇಶ್, ಸಿಹಿಕಹಿ ಚಂದ್ರು ಮುಂತಾದವರಿದ್ದಾರೆ. ಅತಿಥಿ ಪಾತ್ರದಲ್ಲಿ ರಮೇಶ್ ಅರವಿಂದ್ ಕಾಣಿಸಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X