»   » ಅಣ್ಣಾ ಬಾಂಡ್ ತಾರೆ ಪ್ರಿಯಾಮಣಿ ಹೊಸ ಚಿತ್ರ

ಅಣ್ಣಾ ಬಾಂಡ್ ತಾರೆ ಪ್ರಿಯಾಮಣಿ ಹೊಸ ಚಿತ್ರ

Posted By:
Subscribe to Filmibeat Kannada

'ಕೋ ಕೋ' ಚಿತ್ರದ ಬಳಿಕ ಪ್ರಿಯಾಮಣಿ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಿಸುತ್ತಿರುವ ಮಹಿಳಾ ಪ್ರಧಾನ ಚಿತ್ರ 'ಚಾರುಲತಾ'. ಈ ಚಿತ್ರಕ್ಕೆ ಪ್ರಿಯಾಮಣಿ ನಾಯಕಿ. ದ್ವಾರಕೀಶ್ ಪುತ್ರ ಯೋಗಿಶ್ ಕಾರ್ಯಕಾರಿ ನಿರ್ಮಾಪಕರು. 'ಚಾರುಲತಾ' ಚಿತ್ರೀಕರಣ ಮಾ.23ರಿಂದ ಆರಂಭವಾಗಲಿದೆ.

ಕಿಚ್ಚ ಸುದೀಪ್ ಅಭಿನಯದ 'ಓನ್ಲಿ ವಿಷ್ಣುವರ್ಧನ' ನಿರ್ದೇಶಿಸಿದ್ದ ವಿ ಕುಮಾರ್‌ಗೆ ಈ ಬಾರಿಯೂ ನಿರ್ದೇಶನದ ಪಟ್ಟ ನೀಡಲಾಗಿದೆ. ಈ ಚಿತ್ರದ ಉಳಿದ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಸದ್ಯಕ್ಕೆ 'ಅಣ್ಣಾ ಬಾಂಡ್' ಚಿತ್ರೀಕರಣದಲ್ಲಿ ಪ್ರಿಯಾಮಣಿ ಬಿಜಿಯಾಗಿದ್ದಾರೆ. ಇದಾದ ಬಳಿಕ 'ಚಾರುಲತಾ' ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

'ಚಾರುಲತಾ' ಚಿತ್ರದ ಕಾರ್ಯಕಾರಿ ನಿರ್ಮಾಪಕ ಯೋಗೇಶ್ ಮಾತನಾಡುತ್ತಾ, "ಸದ್ಯಕ್ಕೆ ಪ್ರಿಯಾಮಣಿ ಸ್ಪೇನ್‌ನಲ್ಲಿದ್ದಾರೆ. ಅಣ್ಣಾ ಬಾಂಡ್ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಅವರು ತಮ್ಮ ಚಾರುಲತಾ ಚಿತ್ರಕ್ಕೆ ಸಹಿ ಹಾಕಲಿದ್ದಾರೆ" ಎಂದಿದ್ದಾರೆ. (ಏಜೆನ್ಸೀಸ್)

English summary
Actress Priyamani all set to sign one more Kannada movie Charulatha, a woman-centric film. Dwarakish produces Charulatha, while his son Yogish is the executive producer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada