For Quick Alerts
  ALLOW NOTIFICATIONS  
  For Daily Alerts

  ಪೂಜಾಗಾಂಧಿ ಬೆತ್ತಲೆ ಪೋಸ್ಟರ್ ವಿರುದ್ಧ ಪ್ರತಿಭಟನೆ

  By Rajendra
  |

  ನಟಿ ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯ' ಚಿತ್ರದ ಅರೆ ಬೆತ್ತಲೆ ಪೋಸ್ಟರ್‌ಗಳನ್ನು ವಿರೋಧಿಸಿ ಇಂದು ಶನಿವಾರ (ಜ.21) ಅಂಬೇಡ್ಕರ್ ಕ್ರಾಂತಿ ಸೇನೆ ಪ್ರತಿಭಟನೆ ನಡೆಸಿತು. ಸಂಘದ ಕಾರ್ಯಕರ್ತರು ಕರ್ನಾಟಕ ಫಿಲಂ ಚೇಂಬರ್ ಮುಂದೆ ಕುಳಿತು ಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

  'ದಂಡುಪಾಳ್ಯ' ಚಿತ್ರದಲ್ಲಿನ ಪೋಸ್ಟರ್‌ಗಳು ಅಶ್ಲೀಲವಾಗಿದ್ದು ಮಹಿಳೆಯರಿಗೆ ಅವಮಾನ ಮಾಡಲಾಗಿದೆ. ಪೂಜಾಗಾಂಧಿ ಅವರನ್ನು ಕರ್ನಾಟಕಕ್ಕೆ ಬಂದ ನಟಿ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಅವರ ಮೇಲಿನ ಅಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ತಮ್ಮ ಘನತೆಗೆ ತಕ್ಕ ಪಾತ್ರಗಳನ್ನು ಪೋಷಿಸಲಿ ಎಂದು ಸಂಘದ ಕಾರ್ಯಕರ್ತರು ಪ್ರತಿಕ್ರಿಯಿಸಿದರು.

  ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯ' ಚಿತ್ರ ಈಗಾಗಲೆ ಕತೆ ಕದ್ದ ಆರೋಪಕ್ಕೆ ಗುರಿಯಾಗಿದೆ. ಇದರ ನಡುವೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆದಿರುವುದು ಮತ್ತೊಂದು ಬೆಳವಣಿಗೆ. ಆದರೆ ಪೂಜಾಗಾಂಧಿ ಮಾತ್ರ ಇದ್ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ತಮ್ಮ ಪಾತ್ರಕ್ಕೆ ತಾವು ನ್ಯಾಯ ಸಲ್ಲಿಸಿದ್ದೇವೆ ಎಂದಷ್ಟೇ ಹೇಳಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Ambedkar Kranti Sene protests against Pooja Gandhi nude poster in Kannada movie Dandupalya in front of Karnataka film chamber (KFCC) on Saturday 21st. The actress will be seen in her boldest ever role in her forthcoming movie Dandupalya, where she has gone nude for a scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X