ಬಾರ್ಸಿಲೋನಾಗೆ ಹಾರಲಿರುವ ಪುನೀತ್ ಅಣ್ಣಾ ಬಾಂಡ್

By Rajendra

ಶೀಘ್ರದಲ್ಲೇ ಪುನೀತ್ ರಾಜ್ ಕುಮಾರ್ ಅವರ 'ಅಣ್ಣಾ ಬಾಂಡ್' ಚಿತ್ರತಂಡ ಸ್ಪೇನ್ ದೇಶದ ಬಾರ್ಸಿಲೋನಾಗೆ ಹಾರಲಿದೆ. ಅಲ್ಲಿನ ಕಣ್ಮನ ಸೆಳೆಯುವ ತಾಣಗಳಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ ಎನ್ನುತ್ತದೆ ಚಿತ್ರತಂಡ.

ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ಈ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಒಂದು ಹಾಡು ಪ್ರಿಯಾಮಣಿ ಹಾಗೂ ಪುನೀತ್ ಜೊತೆ ಹಾಗೂ ಮತ್ತೊಂದು ಹಾಡನ್ನು ಇಬ್ಬರೂ ಹೀರೋಯಿನ್‌ಗಳ ಜೊತೆ ಚಿತ್ರೀಕರಿಸಿಕೊಳ್ಳಲಿದ್ದಾರೆ.

ಒಂದು ಹಾಡಿಗೆ ಯೋಗರಾಜ್ ಭಟ್ ಹಾಗೂ ಇನ್ನೊಂದು ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ವಿ ಹರಿಕೃಷ್ಣ ಅವರ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಅಣ್ಣಾವ್ರ ಹುಟ್ಟುಹಬ್ಬಕ್ಕೆ ತೆರೆಗೆ ಬರಲಿರುವ 'ಅಣ್ಣಾ ಬಾಂಡ್' ಬಗ್ಗೆ ಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆಗಳಿವೆ. (ಏಜೆನ್ಸೀಸ್)

More from Filmibeat

English summary
Puneeth Rajkumar, Priyamani and Nidhi Subbaiah lead Duniya Soori directed Anna Bond two songs to be shot in Barcelona. One separate song will be picturised on Puneth and Priyamani, while one more song will be shot on Puneeth along with both the heroines Priyamani and Nidhi Subbaiah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X