ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಎಚ್ಡಿಕೆ ಅರ್ಪಿಸುವ ಲಕ್ಕಿ

By Rajendra

ಎಚ್.ಡಿ.ಕುಮಾರಸ್ವಾಮಿ ಅರ್ಪಿಸುವ, ಶಮಿಕಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ 'ಲಕ್ಕಿ' ಚಿತ್ರ ಈ ವಾರ (ಫೆ.24) ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಟ್ಟು ಐವತ್ತೆಂಟು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಡಾ.ಸೂರಿ ತಿಳಿಸಿದ್ದಾರೆ. ಲಕ್ಕಿ ಚಿತ್ರ ರಾಜ್ಯದಾದ್ಯಂತೆ 60 ರಿಂದ 70 ಕೇಂದ್ರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಯಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಮ್ಯಾ. ಸಾಧುಕೋಕಿಲಾ, ಶರಣ್, ಬಿರಾದಾರ್, ಪದ್ಮಾಕುಮುಟಾ, ಶಂಕರ್‌ಭಟ್, ತಬಲನಾಣಿ, ವಿಜಯ್ ಚೆಂಡೂರು, ಎಂ.ಎಸ್.ಉಮೇಶ್, ಎಂ.ಎನ್.ಲಕ್ಷ್ಮೀದೇವಿ, ನಂದಕಿಶೋರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರು.

ವಿ.ರಾಘವೇಂದ್ರ ಬಂಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ಲಕ್ಕಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನವಿದೆ. ರವಿವರ್ಮರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗೌಸ್‌ಫೀರ್ ಹಾಡುಗಳನ್ನು ರಚಿಸಿರುವುದಲ್ಲದೆ ಸಂಭಾಷಣೆಯನ್ನೂ ಬರೆದಿದ್ದಾರೆ. ಹರ್ಷ, ರಾಬರ್ಟ್ ಹಾಗೂ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Golden girl Ramya and Yash lead movie Lucky is releasing in about 60 to 70 centres. The movie is all set to release on February 24. The movie is being produced by Radhika Kumaraswamy and directed by Dr. Suri. Arjun Janya has composed the music.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X